Home » ಮದುವೆ ನಿಶ್ಚಯವಾಗಿದ್ದ ಯುವತಿ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ

ಮದುವೆ ನಿಶ್ಚಯವಾಗಿದ್ದ ಯುವತಿ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ

by Praveen Chennavara
0 comments

ಹೋಟೆಲ್ ರೂಮ್‌ವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, ಮೃತಳನ್ನು ಸೋನಿಯಾ ಎಂದು ಗುರುತಿಸಲಾಗಿದೆ.

ಫೆಬ್ರವರಿ 27 ರಂದು ವಿಕೆ ಸೌತ್ ಪೊಲೀಸರಿಗೆ ಮಹಿಪಾಲ್‌ಪುರದ ಲಕ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಯುವತಿಯ ಶವದ ಬಗ್ಗೆ ಮಾಹಿತಿ ಸಿಕ್ಕಿತು. ಹೋಟೆಲ್ ಕೊಠಡಿಗೆ ನುಗ್ಗಿ ಸೋನಿಯಾಳನ್ನು ಹತ್ಯೆ ಮಾಡಲಾಗಿತ್ತು.ಆಕೆಯ ಸ್ನೇಹಿತ ಶಿವಂ ಎಂಬುವವನೇ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ. ಗಾಜಿಯಾಬಾದ್ ನಿವಾಸಿ ಶಿವಂ ಚೌಹಾಣ್ ಮತ್ತು ಯುವತಿ ಕಳೆದ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಫೆಬ್ರವರಿ 25 ರಂದು ಶಿವಂ, ಆ ಕೊಠಡಿಯನ್ನು ಬುಕ್ ಮಾಡಿದ್ದ. ಇವರಿಬ್ಬರಿಗೂ ವಿವಾಹ ನಿಶ್ಚಯವಾಗಿತ್ತು.ಆದರೆ ಕೊಲೆ ಯಾಕಾಗಿ ನಡೆದಿದೆ ಎಂದು ತಿಳಿದುಬಂದಿಲ್ಲ. ಜೊತೆಗೆ ಸೋನಿಯಾ ಕೊಲೆಯಾದ ಬಳಿಕ ಸ್ನೇಹಿತ ಶಿವಂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರ ತಿಳಿಸಿದ್ದಾರೆ.

You may also like

Leave a Comment