Home » Marriage: ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮುರಿದುಬಿದ್ದ ಮದುವೆ ; ಅಂತದ್ದೇನಾಯಿತು?!

Marriage: ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮುರಿದುಬಿದ್ದ ಮದುವೆ ; ಅಂತದ್ದೇನಾಯಿತು?!

by Mallika
0 comments
Marriage

Marriage: ಇತ್ತೀಚೆಗೆ ಹೆಚ್ಚಿನ ವಧು-ವರ ಪ್ರೀ ವೆಡ್ಡಿಂಗ್ ಶೂಟ್ (pre-wedding shoot) ಮಾಡಿಸುತ್ತಾರೆ. ಮದುವೆಗೂ (Marriage) ಮುನ್ನ ಮಾಡಿಸುವ ಈ ಫೋಟೋಶೂಟ್ ನಂತರದಲ್ಲಿ ‘ಮೆಮೋರಿ’ ಆಗಿರುತ್ತದೆ. ಆದರೆ, ಇದು ಸಿಹಿನೆನಪಾಗಬೇಕೇ ಹೊರತು ಕಹಿಘಟನೆಯಾಗಿ ಉಳಿಯಬಾರದು. ಹೌದು, ಚತ್ತೀಸ್ ಗಢದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಬಳಿಕ ವಿವಾಹವಾಗಬೇಕಿದ್ದ ಜೋಡಿ ದೂರವಾಗಿದ್ದಾರೆ.

ಎಲ್ಲರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಿದ್ದ ಜೋಡಿ ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮದುವೆ, ಮನಸ್ಸು ಮುರಿದು ಬಿದ್ದಿದೆ. ಸಂಬಂಧಿಕರೆಲ್ಲಾ ಸೇರಿ ನವ ವಧು-ವರನನ್ನು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಲು ಕಳುಹಿಸಿದ್ದು, ಶೂಟ್ ಬಳಿಕ ಮದುವೆ ಬೇಡ ಎಂದು ಹೇಳಿ ಇಬ್ಬರೂ ದೂರವಾಗಿದ್ದಾರೆ.

ಅಷ್ಟೇ ಅಲ್ಲದೆ, ಯುವತಿ ಪ್ರೀ ವೆಡ್ಡಿಂಗ್ ಶೂಟ್ ನ ತನ್ನ ಫೋಟೋ, ವೀಡಿಯೋಗಳನ್ನು ಯುವಕನ ಮೊಬೈಲ್ ನಿಂದ ಡೀಲೀಟ್ ಮಾಡಿಸುವಂತೆ ಹಾಗೂ ವಿವಾಹಕ್ಕಾಗಿ ಮಾಡಿದ್ದ ಖರ್ಚಿನಿಂದ ನಷ್ಟ ಉಂಟಾಗಿದ್ದು, ಪರಿಹಾರ ಕೊಡಿಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.

ಅದರಂತೆ ಆಯೋಗ ಯುವಕ ಹಾಗೂ ಯುವಕನ ಕುಟುಂಬಸ್ಥರನ್ನು ಕರೆಸಿದ್ದು, ಯುವಕ ಆಕೆ ಬೇಡಿಕೆ ಇಟ್ಟಿದ್ದ ಹಣ ನೀಡುವುದಾಗಿ ಹಾಗೂ ಪ್ರೀ ವೆಡ್ಡಿಂಗ್ ಆಲ್ಬಂನ್ನು ಡಿಲೀಟ್ ಮಾಡುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ ಯುವತಿ ತಾನು ನೀಡಿದ ದೂರನ್ನು ವಾಪಸ್ ತೆಗೆದುಕೊಂಡಿದ್ದಾಳೆ.

ಇನ್ನು ಯುವಕ ಭವಿಷ್ಯದಲ್ಲಿ ಹುಡುಗಿಯ ಯಾವುದೇ ಚಿತ್ರ ಅಥವಾ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದರೆ, ಸಂತ್ರಸ್ತೆಯಾಗಿ ಅವಳು ಸೈಬರ್ ಕ್ರೈಮ್ ಸೆಲ್‌ಗೆ ದೂರು ನೀಡಬಹುದು ಎಂದು ಆಯೋಗವು ತಿಳಿಸಿದೆ.

ಇದನ್ನೂ ಓದಿ:CBSE 12th Exam Result: CBSE 12ನೇ ತರಗತಿ ರಿಸಲ್ಟ್ ಪ್ರಕಟ; ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!

You may also like

Leave a Comment