Home » Physical Relationship: ಮದುವೆಯಾದ ನಂತರ ಲೈಂಗಿಕತೆಗೆ ಒಪ್ಪದ ಪತಿ; ಎಫ್‌ಐಆರ್‌ ದಾಖಲಿಸಿ ಬಿಟ್ಟ ಪತ್ನಿ

Physical Relationship: ಮದುವೆಯಾದ ನಂತರ ಲೈಂಗಿಕತೆಗೆ ಒಪ್ಪದ ಪತಿ; ಎಫ್‌ಐಆರ್‌ ದಾಖಲಿಸಿ ಬಿಟ್ಟ ಪತ್ನಿ

0 comments

Physical Relationship: ಗಂಡನೋರ್ವ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಯೊಬ್ಬಳು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆಯೊಂದು ಬಿಹಾರದ ಮಿಜಾಫರ್‌ಪುರದಲ್ಲಿ ನಡೆದಿದೆ. ಮಹಿಳಾ ಪೊಲೀಸ್‌ ಸ್ಟೇಷನ್‌ ಇದೀಗ ಮಹಿಳೆಯ ಪತಿ ಹಾಗೂ ಇನ್ನೂ ಆರು ಜನರ ಮೇಲೆ ಕೇಸು ದಾಖಲು ಮಾಡಿದ್ದಾರೆ. ಹಾಗೂ ತನಿಖೆ ಆರಂಭಿಸಿದ್ದಾರೆ.

ಮಹಿಳೆ ವೈಶಾಲಿ ಜಿಲ್ಲೆಯ ಲಾಲ್‌ಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹಳ್ಳಿಯ ಮೂಲದವಳು. ನನಗೆ 31 ಮೇ 2021 ರಂದು ಮದುವೆಯಾಗಿತ್ತು. ನಂತರ ನಾನು ಅತ್ತೆ ಮನೆಯಲ್ಲಿದ್ದೆ. ಮದುವೆಯಾಗಿ ಎರಡು ವರ್ಷವಾಗುತ್ತಾ ಬಂದರೂ ನನ್ನ ಪತಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲ. ಈ ವಿಚಾರ ನಾನು ನನ್ನ ಅತ್ತೆಗೆ ತಿಳಿಸಿದಾಗ ಅವರು ನನಗೆ ಯಾವುದೇ ಸಹಾಯ ಮಾಡಿಲ್ಲ. ನಂತರ ನಾನು ನನ್ನ ಪತಿಯನ್ನೇ ಪ್ರಶ್ನೆ ಮಾಡಿದಾಗ ನನ್ನ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಮಾಡಲಾಗಿದೆ. ಇದರ ಜೊತೆಗೆ ನಾನು ನನ್ನ ತಾಯಿ ಮನೆಗೆ ಹೊರಡಲು ನಿಂತಾಗ ಎಲ್ಲರೂ ಸೇರಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಮದುವೆಯನ್ನು ಮುಗಿಸುವ ಎಂದು ತೀರ್ಮಾನ ಮಾಡಿದ ವೈಶಾಲಿ ತನ್ನ ತವರು ಮನೆಗೆ ಮರಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕೆಯನ್ನು ತವರು ಮನೆಗೆ ಕಳುಹಿಸಿಕೊಡಲು ಗಂಡನ ಮನೆಯವರು ಬಿಟ್ಟಿಲ್ಲ. ತವರು ಮನೆಗೆ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಶಾಂತಿಯುತವಾಗಿ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಿದೆ. ಆದರೆ ಯಾವುದೂ ಕೈಗೂಡಿ ಬರಲಿಲ್ಲ. ನನಗೆ ಸಹನೆ ಇಲ್ಲ. ಅಲ್ಲದೆ ನನ್ನ ಮೇಲೆ ನಿಂದನೆ, ಹಲ್ಲೆ ಕೂಡಾ ಮಾಡುತ್ತಿದ್ದಾರೆ. ಹಾಗಾಗಿ ಬೇರೆ ದಾರಿ ಕಾಣದೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

You may also like

Leave a Comment