Home » ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಬಿಡದ ಪ್ರಿಯಕರ | ಜತೆಯಾಗಿ ನೆಲೆಸಿದ್ದವರು ಪೊಲೀಸ್ ಬಲೆಗೆ

ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಬಿಡದ ಪ್ರಿಯಕರ | ಜತೆಯಾಗಿ ನೆಲೆಸಿದ್ದವರು ಪೊಲೀಸ್ ಬಲೆಗೆ

0 comments

ಮದುವೆಯಾಗಿ ಎರಡು ಮಕ್ಕಳ ತಾಯಿಯೋರ್ವಳು ತನ್ನ ಪ್ರಿಯಕರನ ಜೊತೆ ಓಡಿ ಬಂದಿದ್ದು ಈಗ ಪೊಲೀಸರು ಕಂಡು ಹಿಡಿದ ಘಟನೆಯೊಂದು ನಡೆದಿದೆ.ತಮಿಳುನಾಡಿನಿಂದ ಕಾರವಾರಕ್ಕೆ ಬಂದು ನೆಲೆಸಿದ್ದ ಪ್ರೇಮಿಗಳನ್ನು ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ.

ತನ್ನ ಬಾಲ್ಯದ ಗೆಳತಿ ಅಯಿಸಾಳಿಗೆ(24) ಮದುವೆಯಾಗಿ ಎರಡು ಮಕ್ಕಳಿದ್ದರೂ, ಮೈದುನ್ (27) ಹಾಗೂ ಅಯಿಸಾಳ ನಡುವೆ ಪ್ರೇಮಾಂಕುರವಾಗಿತ್ತು.
ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರವಾಗಿದ್ದು, ಆರು ತಿಂಗಳಿ ಹಿಂದೆ ತಮಿಳುನಾಡು ತೊರೆದು ಕಾರವಾರ ತಾಲೂಕಿನ ಸೋನಾರವಾಡದಲ್ಲಿದ್ದ ಬಂದು ಈ ಪ್ರೇಮಿಗಳು ವಾಸಿಸುತ್ತಿದ್ದರು.

ಈ ಪ್ರೇಮಿಗಳು ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್ ನಗರದ ನಿವಾಸಿಗಳಾಗಿದ್ದು, ಯುವತಿ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ತನಗೆ ಇಷ್ಟವಿಲ್ಲದೆ ಮತ್ತೊಬ್ಬನ ಜತೆಗೆ ಆಯಿಸಾ ಮದುವೆಯಾಗಿದ್ದಳು. ಹಾಗಾಗಿ ಎಲ್ಲರನ್ನೂ ಧಿಕ್ಕರಿಸಿ, ತಾನು ಹೆತ್ತ ಮಕ್ಕಳನ್ನೂ ಬಿಟ್ಟು, ತನ್ನ ಪ್ರೇಮಿಯೊಂದಿಗೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದು ಇಲ್ಲಿ ನೆಲೆಸಿದ್ದರು.

ಯುವಕ ಬೀರ್ ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಕಾರವಾರದಲ್ಲಿ ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ ಪ್ರೇಮಿಗಳನ್ನು ಪತ್ತೆ ಮಾಡಿದ ತಮಿಳಿನಾಡಿನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಯುವತಿಯನ್ನು ಆಕೆಯ ಮಾವನಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ.

You may also like

Leave a Comment