Home » Matrimonial Ad : ಸಾಫ್ಟ್‌ವೇರ್‌ ವರ ಬೇಡ | ಆನ್ಲೈನ್ ನಲ್ಲಿ ವೈರಲ್ ಆಯಿತು ‘ವರ ಬೇಕು ‘ ಜಾಹೀರಾತು!!!

Matrimonial Ad : ಸಾಫ್ಟ್‌ವೇರ್‌ ವರ ಬೇಡ | ಆನ್ಲೈನ್ ನಲ್ಲಿ ವೈರಲ್ ಆಯಿತು ‘ವರ ಬೇಕು ‘ ಜಾಹೀರಾತು!!!

0 comments

ವರನ ಕಡೆಯವರು ವರದಕ್ಷಿಣೆ ಪಡೆದು ಮದುವೆಯಾಗುತ್ತಿದ್ದ ಕಾಲವೊಂದಿತ್ತು. ಆದರೀಗ ಟ್ರೆಂಡ್ ಬದಲಾಗಿದೆ. ಹುಡುಗಿಯೇ ಹತ್ತು ಹಲವು ಕಂಡೀಷನ್ , ಡಿಮ್ಯಾಂಡ್ ಇಟ್ಟು ವರನನ್ನು ರಿಜೆಕ್ಟ್ ಮಾಡುವ ಟ್ರೆಂಡ್ ಜೋರಾಗಿದೆ. ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿ, ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಯಾವುದೇ ಕಾರಣಕ್ಕೂ ಕಾಲ್‌ ಮಾಡ್ಬೇಡಿ ಎಂದು ಕಂಡೀಷನ್ ಹಾಕಿ, ಐಎಎಸ್‌/ಐಪಿಎಸ್‌, ವೈದ್ಯಕಿಯ ವ್ಯಾಸಂಗ ಮಾಡಿರುವ ವರ ಬೇಕಾಗಿದ್ದಾರೆ ಎಂದು ಜಾಹೀರಾತು ಹಾಕಿದ್ದು, ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿ, ಇಂಜಿನಿಯಿಂಗ್ ವರರಿಗೆ ನಿರಾಸೆ ಮೂಡಿಸಿದ್ದಾರೆ.

ಪ್ರತಿಯೊಂದು ವಿಷಯದಲ್ಲೂ ಬದಲಾವಣೆಯಾಗಿ, ತಾಂತ್ರಿಕವಾಗಿ ಬೆಳೆದಂತೆ ಜೀವನ ಸಂಗಾತಿ ಆಯ್ಕೆಯೂ ಡಿಜಿಟಲೈಸ್‌ ಆಗಿದ್ದು, ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳು, ಆ್ಯಪ್‌ಗಳು ಸಂಗಾತಿ ಆಯ್ಕೆಯನ್ನು ಮಾಡಲು ಅವಕಾಶ ಕಲ್ಪಿಸಿದೆ. ಜೀವನ ಸಂಗಾತಿ ಆಯ್ಕೆಯ ವಿಚಾರ ಕಾಮನ್ ವಿಷಯವಾಗಿದ್ದು, ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಜಾಹಿರಾತು ಹೊಸ ಸಂಚಲನ ಸೃಷ್ಟಿಸಿದೆ. “ವರ ಬೇಕಾಗಿದ್ದಾರೆ” ಎಂದು ಜಾಹಿರಾತು ಹಾಕಿ, ಎಂದು ಉಲ್ಲೇಖಿಸಿರುವುದು ನೋಡುಗರಿಗೆ ಆಶ್ಚರ್ಯ ಮೂಡಿಸಿರುವುದಂತು ಸುಳ್ಳಲ್ಲ.

ಎಂಬಿಎ ಓದಿರುವ ಸಿರಿವಂತ ಮನೆತನದ ವಧುವಿಗೆ ಐಎಎಸ್‌/ಐಪಿಎಸ್‌, ಕೆಲಸ ಮಾಡುತ್ತಿರುವ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ವೈದ್ಯ ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ . ಇದರ ಜೊತೆಗೆ ‘ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಯಾವುದೇ ಕಾರಣಕ್ಕೂ ಕರೆ ಮಾಡಬೇಡಿ’ ಎಂದು ಉಲ್ಲೇಖಿಸಲಾಗಿದೆ

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಟ್ರೆಂಡ್ ಆಗುತ್ತಿದ್ದು, ಜಾಹೀರಾತಿಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

You may also like

Leave a Comment