Home » ಮಾಜಿ ಶಾಸಕರ ಪುತ್ರಿ ಎಂಬಿಬಿಎಸ್ ಪದವೀಧರೆ ನೇಣಿಗೆ ಶರಣು!

ಮಾಜಿ ಶಾಸಕರ ಪುತ್ರಿ ಎಂಬಿಬಿಎಸ್ ಪದವೀಧರೆ ನೇಣಿಗೆ ಶರಣು!

0 comments

ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಮಾಜಿ ಶಾಸಕರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾದ್ರಿ ಕೋಟಗುಡೆಮ್ ಜಿಲ್ಲೆಯಲ್ಲಿ ನಡೆದಿದೆ.

ತಾತಿ ಮಹಾಲಕ್ಷ್ಮೀ ಮೃತ ದುರ್ದೈವಿ. ಈಕೆ ಅಶ್ವರಾವ್‌ಪೇಟೆಯ ಮಾಜಿ ಶಾಸಕ ತಾತಿ ವೆಂಕಟೇಶ್ವಗ್ ಅವರ ಪುತ್ರಿ. ಭದ್ರಾದ್ರಿ ಜಿಲ್ಲೆಯ ಸರಪಾಕಾ ಪಟ್ಟಣದ ತಮ್ಮ ಮನೆಯಲ್ಲಿ ಬುಧವಾರ ನೇಣಿಗೆ ಕೊರಳೊಡ್ಡಿದ್ದಾರೆ.

ಮಹಾಲಕ್ಷ್ಮೀ ಇತ್ತೀಚೆಗಷ್ಟೇ ಎಂಬಿಬಿಎಸ್ ಮುಗಿಸಿ, ಸ್ನಾತಕೋತ್ತರ ಪರೀಕ್ಷೆಯ ತಯಾರಿದ್ದರು. ಆದರೆ, ಇದೀಗ ನೇಣಿಗೆ ಶರಣಾಗಿದ್ದಾರೆ.

ನಿನ್ನೆ ಕುಟುಂಬದ ಸದಸ್ಯರು ಕೋಣೆಯ ಬಾಗಿಲು ಬಡಿದು ಹೊರಗೆ ಬರುವಂತೆ ಮಹಾಲಕ್ಷ್ಮೀಯನ್ನು ಕೇಳಿದ್ದಾರೆ. ಆದರೆ, ತುಂಬಾ ಹೊತ್ತಾದರೂ ಆಕೆ ಬರದಿದ್ದಾಗ ಅನುಮಾನಗೊಂಡು ಬಾಗಿಲನ್ನು ಮುರಿದಾಗ ಆಕೆಯ ದೇಹ ಹಗ್ಗದಲ್ಲಿ ನೇತಾಡುವುದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ತಕ್ಷಣ ಆಕೆಯನ್ನು ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಮಹಾಲಕ್ಷ್ಮಿ ಸಾವಿನೊಂದಿಗೆ ವೆಂಕಟೇಶ್ವರ ಅವರ ಮನೆಯಲ್ಲಿ ದುರಂತದ ಛಾಯೆ ಆವರಿಸಿದೆ. ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನಷ್ಟೇ ತಿಳಿಯಬೇಕಿದೆ.

You may also like

Leave a Comment