Home » Michaung Cyclone: ‘ಮಿಚುವಾಂಗ್’ ಎಫೆಕ್ಟ್ – ಸಂಪೂರ್ಣ ಮುಳುಗಿದ ಚೆನ್ನೈ ! ರಾಜ್ಯದ ಈ ಭಾಗಗಳಲ್ಲೂ ಭಾರೀ ಮಳೆ

Michaung Cyclone: ‘ಮಿಚುವಾಂಗ್’ ಎಫೆಕ್ಟ್ – ಸಂಪೂರ್ಣ ಮುಳುಗಿದ ಚೆನ್ನೈ ! ರಾಜ್ಯದ ಈ ಭಾಗಗಳಲ್ಲೂ ಭಾರೀ ಮಳೆ

1 comment
Michaung Cyclone

Michaung Cyclone : ಮಿಚುವಾಂಗ್ ಚಂಡಮಾರುತದ (Michaung Cyclone)ಪರಿಣಾಮ ಚೆನ್ನೈ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು (Heavy Rain), ನಗರದ ಬಹುತೇಕ ಕಡೆ ಜಲಾವೃತಗೊಂಡಿದೆ. ಕಾರುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದು, ಇದೀಗ ಅಲ್ಲಿನ ಜನರು ಆಶ್ರಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಿಚಾಂಗ್‌ ಚಂಡ ಮಾರುತ ಸೃಷ್ಟಿಸಿದ ಅವಾಂತರದಿಂದಾಗಿ ಚೆನ್ನೈನಲ್ಲಿ ದಾಖಲೆಯ ಮಳೆ ಸುರಿದಿದೆ. ಮಳೆಯಿಂದಾಗಿ ಇಡೀ ಚೆನ್ನೈ ಮಹಾನಗರ ಸೇರಿದಂತೆ ತಮಿಳುನಾಡಿನ ಹಲವೆಡೆ ಅನಾಹುತಗಳಾಗಿವೆ.

ಬೆಂಗಳೂರು ಒಳಗೊಂಡಂತೆ ಸುತ್ತ ಮುತ್ತಲಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Rain Alert)ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಮಿಚುವಾಂಗ್ ಪರಿಣಾಮ(Michaung Cyclone), ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಚಳಿಯ ವಾತಾವರಣ ಕಂಡುಬರುತ್ತಿದೆ. ಇದರ ನಡುವೆ, ಹವಾಮಾನ ಇಲಾಖೆ, ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಂಭವದ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: Digital Marketing: ಉದ್ಯೋಗಾಕಾಂಕ್ಷಿಗಳೇ ಗಮನಿಸಿ- ಇಲ್ಲಿದೆ ನೋಡಿ ಕೈತುಂಬಾ ಸಂಬಳ ಸಿಗೋ ನೆಮ್ಮದಿ ಉದ್ಯೋಗವಕಾಶ

You may also like

Leave a Comment