Home » Monsoon 2023: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಂಭವ! ರೆಡ್‌ ಅಲರ್ಟ್‌ ಘೋಷಣೆ ಮಾಡಿದ ಹವಾಮಾನ ಇಲಾಖೆ

Monsoon 2023: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಂಭವ! ರೆಡ್‌ ಅಲರ್ಟ್‌ ಘೋಷಣೆ ಮಾಡಿದ ಹವಾಮಾನ ಇಲಾಖೆ

by Mallika
0 comments
Monsoon 2023

Monsoon 2023: ಕರ್ನಾಟಕದಲ್ಲಿ ಈಗ ಮಳೆಯ ಅಬ್ಬರ. ಈಗಾಗಲೇ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ ಸೇರಿಕೊಂಡಿದೆ.

ಈಗ ಜುಲೈ 6ರಂದು ಭಾರೀ ಮಳೆಯ(Monsoon 2023) ಸಂಭವವಿದ್ದು, ಹಾಗಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಇದರಲ್ಲಿ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದೆ.

ಈ ಬಾರಿ ಮುಂಗಾರು ಮಳೆ ಬಹಳ ವಿಳಂಬವಾಗಿ ಆರಂಭವಾಗಿದ್ದು, ಮಳೆಗಾಗಿ ಕಾದ ಜನರು, ಈಗ ಮಳೆಯ ಆಗಮನದಿಂದ ಖುಷಿಯಾಗಿದ್ದಾರೆ. ಆದರೆ ಮಳೆಯ ಅಬ್ಬರ ಇತ್ತೀಚೆಗೆ ಹೆಚ್ಚಾಗಿದೆ. ಜನರು ಈ ಬಗ್ಗೆ ತಿಳಿದುಕೊಂಡು ಜಾಗೃತರಾಗಿರುವುದು ಉತ್ತಮ.

ಕರ್ನಾಟಕ ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯ ಸಂಭವವಿದೆ. ಗಂಟೆಗೆ 40-45 ಕಿ.ಮೀ. ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಜೆಪಿ ಧ್ವಜದ ತುದಿಯಲ್ಲಿ ಸಿಕ್ಕಿಕೊಂಡ ಕಾಂಡೋಮ್; ಪೊಲೀಸರಿಗೆ ದೂರು, ವೀಡಿಯೊ ವೈರಲ್ !

You may also like

Leave a Comment