Moral Police: ಹಾವೇರಿ ಜಿಲ್ಲೆಯಲ್ಲಿ ಅನ್ಯಕೋಮಿನ ಪುರುಷರೊಂದಿಗೆ ಸಿಕ್ಕಿಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಘಾಸಿಗೊಳಿಸಿ ಗ್ಯಾಂಗ್ ರೇಪ್ ಮಾಡಲು ವಿಫಲ ಪ್ರಯತ್ನ ಘಟನೆ ನಡೆಸಿದ್ದು, ಎರಡು ದಿನದ ಬಳಿಕ ಬೆಳಕಿಗೆ ಬಂದಿದೆ. ಈ ಪ್ರಕರಣ ಕುರಿತು ಇಬ್ಬರನ್ನು ಬಂಧಿಸಲಾಗಿದೆ. ಮತ್ತೊಂದೆಡೆ ನೈತಿಕ ಪೊಲಿಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವೀಡಿಯೋ ವೈರಲ್ ಆಗಿದೆ.
ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್‌ಗೆ ನುಗ್ಗಿದ್ದು, ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಈಗ ಈ ಘಟನೆ ಎರಡು ವಿಡಿಯೋ ವೈರಲ್ ಆಗಿದೆ.
ಇವರು ಮುಸ್ಲಿಂ ಮಹಿಳೆಯರು, ಹುಡುಗಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಹಿಂದೂ ಹುಡುಗರ ಜೊತೆ ಕಾಣಿಸಿಕೊಳ್ಳುವ ಮುಸ್ಲಿಂ ಹುಡುಗಿಯರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ವರದಿಯಾಗಿದೆ. ಜೋಡಿಯಾಗಿ ಬಂದವರ ಮೇಲೆ ಅಟ್ಯಾಕ್ ಮಾಡಿ ಹುಡುಗಿಯರನ್ನು ಎಳೆದೊಯ್ಯುತ್ತಿದ್ದರು ಎಂದು ವರದಿಯಾಗಿದೆ. ಇದೀಗ ಹಾನಗಲ್ ಜನತೆ ಎರಡನೇ ವೀಡಿಯೋ ವೈರಲ್ ಆಗುತ್ತಿದ್ದಂತೆ ಶಾಕ್‌ಗೊಳಗಾಗಿದ್ದಾರೆ. ಇದರಲ್ಲಿ ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ.
ಇತ್ತ ಈ ವೀಡಿಯೋ ವೈರಲ್ ಬೆನ್ನಲ್ಲೇ ಮಹಿಳೆ ಪೊಲೀಸ್ ಠಾಣೆಗೆ ಕುಟುಂಬ ಸಮೇತ ಹಾಜರಾಗಿದ್ದು, ನನ್ನ ಮೇಲೆ ಹಲ್ಲೆ ಆಗಿದೆ ಎಂದು ಆರೋಪ ಮಾಡಿದ್ದಾಳೆ. ಆದರೆ ಸಂತ್ರಸ್ತೆಯ ಗಂಡ ಬೇರೆನೇ ಹೇಳುತ್ತಿದ್ದು, ನನ್ನ ಹೆಂಡತಿಯ ಮೇಲೆ ನೈತಿಕ್ ಪೊಲೀಸ್ ಗಿರಿ ಜೊತೆ ಗ್ಯಾಂಗ್ ರೇಪ್ ಆಗಿದೆ ಎಂಬ ಆರೋಪ ಮಾಡುತ್ತಿದ್ದಾನೆ ಎಂದು ವರದಿಯಾಗಿದೆ.
