Home » Mumbai: ಪತಿಯ ತೀರದ ಕಾಮ ದಾಹ! ಕಾಮದಾಹಕ್ಕೆ ಸುಸ್ತಾದ ಪತ್ನಿ ಮಾಡೇ ಬಿಟ್ಲು ಮಾಸ್ಟರ್ ಪ್ಲ್ಯಾನ್!!!

Mumbai: ಪತಿಯ ತೀರದ ಕಾಮ ದಾಹ! ಕಾಮದಾಹಕ್ಕೆ ಸುಸ್ತಾದ ಪತ್ನಿ ಮಾಡೇ ಬಿಟ್ಲು ಮಾಸ್ಟರ್ ಪ್ಲ್ಯಾನ್!!!

2 comments
Mumbai

Mumbai Shocking News: ಪದೇ ಪದೇ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿರುವ ಪತಿಯಿಂದ ಬೇಸತ್ತು ಪತ್ನಿಯೊಬ್ಬಳು ಮಾಸ್ಟರ್ ಪ್ಲಾನ್ ಮಾಡಿ ಪತಿಯನ್ನು ಸಾಯಿಸಲು(Women Kills Husband) ಹೊರಟಿರುವ ಆಘಾತಕಾರಿ ಘಟನೆ (shocking news)ಬೆಳಕಿಗೆ ಬಂದಿದೆ.

ಮುಂಬೈ (Mumbai) ನಗರದ ವಿರಾರ್( ಪಶ್ಚಿಮ) ಶಿರ್ಗಾಂವ್ ನಿವಾಸಿಯಾಗಿರುವ ಅನಿಲ್ ಯಶ್ವಂತ್ ಪಾಟೀಲ್ ಖಾಸಗಿ ಕಂಪೆನಿಯಲ್ಲಿ ಎಲೆಕ್ಟ್ರಿಸಿಯನ್ ವೃತ್ತಿಯಲ್ಲಿದ್ದ. ಕಳೆದ ಮೂರು ತಿಂಗಳ ಹಿಂದೆ 21 ವರ್ಷ ವಯಸ್ಸಿನ ಆಶಾ ಎನ್ನುವ ಯುವತಿಯನ್ನು ವಿವಾಹವಾಗಿದ್ದ.

ವಿವಾಹ ನಂತರ ಲೈಂಗಿಕ ಸುಖಕ್ಕಾಗಿ ಪತಿ ಪದೇ ಪದೇ ಪೀಡಿಸುತ್ತಿದ್ದ ಪತಿಯ ವರ್ತನೆಯಿಂದ ಬೇಸತ್ತು ಪತಿ ಕಚೇರಿಗೆ ತೆಗೆದುಕೊಂಡು ಹೋಗುವ ಟಿಫಿನ್‌ ಬಾಕ್ಸ್‌ನಲ್ಲಿ, ಬೆಳಗ್ಗಿನ ಆಹಾರದಲ್ಲಿ ಕೀಟನಾಶಕ ಬೆರೆಸಿದ್ದಳು. ಆದರೆ ಹೊಟ್ಟೆನೋವಿನಿಂದಾಗಿ ಆತ ಟಿಫಿನ್‌ ಬಾಕ್ಸ್‌ನಲ್ಲಿರುವ ಆಹಾರವನ್ನು ರಸ್ತೆಯಲ್ಲಿ ಬಿಸಾಕಿ ಹೋಗಿದ್ದ. ಸಾಯಂಕಾಲ ಮನೆಗೆ ಬಂದೊಡನೆ ಟೀ ಕೊಡುವಂತೆ ಕೇಳಿದ ಪತಿಗೆ ಮತ್ತೆ ಚಹಾದಲ್ಲಿ ಕೀಟನಾಶಕ ಬೆರಸಿ ನೀಡಿದ್ದಾಳೆ. ಚಹಾ ಕುಡಿದ ನಂತರ ಅನಿಲ್ ಆರೋಗ್ಯದಲ್ಲಿ ಏರುಪೇರಾಗಿ ಹತ್ತಿರದಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ತುರ್ತುನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಇದೇ ಸಮಯ ಮನೆಯಲ್ಲಿರುವ ಕುಟುಂಬದ ಸದಸ್ಯರು ಆಶಾ ಬಳಿ ಕೀಟನಾಶಕ ಪತ್ತೆಯಾಗಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಶಾಳನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪತಿಯ ಸೆಕ್ಸ್ ದಾಹದಿಂದ ಬೇಸತ್ತು ಇಂತಹ ಕೃತ್ಯ ಎಸಗಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಇದೀಗ ವಿರಾರ್ ಪೊಲೀಸ್ ಠಾಣೆಯ ಪೊಲೀಸರು ಹತ್ಯೆಗೈಯಲು ಪ್ರಯತ್ನಿಸಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ 2 ವರ್ಷ ನಿರಂತರ ಅತ್ಯಾಚಾರ- ಮದುವೆ ಹೆಸರಲ್ಲಿ 3 ಲಕ್ಷಕ್ಕೆ ಮಾರೇ ಬಿಟ್ಟ !!

You may also like

Leave a Comment