Home » ಸೊಸೆಯ ಪ್ರಾಣ ಉಳಿಸಲು ಅತ್ತೆ ಮಾಡಿದಳು ಮಹತ್ಕಾರ್ಯ! ಅಚ್ಚರಿಗೊಳಿಸುವ ಅಪರೂಪದ ಸುದ್ದಿ!!!

ಸೊಸೆಯ ಪ್ರಾಣ ಉಳಿಸಲು ಅತ್ತೆ ಮಾಡಿದಳು ಮಹತ್ಕಾರ್ಯ! ಅಚ್ಚರಿಗೊಳಿಸುವ ಅಪರೂಪದ ಸುದ್ದಿ!!!

0 comments
Viral News

Viral News: ಅತ್ತೆ – ಸೊಸೆ ಕಿತ್ತಾಡಿಕೊಂಡು ಬೇರೆ ಬೇರೆ ಮನೆಗಳನ್ನು ಮಾಡಿಕೊಳ್ಳುವುದು, ಒಬ್ಬರಿಗೊಬ್ಬರು ಮಾತನಾಡದೇ ಇರುವ ಈ ಕಾಲದಲ್ಲಿ ಸೊಸೆಗೆಂದು ತನ್ನ ಜೀವವನ್ನೇ ಪಣಕ್ಕಿಟ್ಟ ಅತ್ತೆಯ ಬಗ್ಗೆ ಕೇಳಲೇ ಬೇಕು. ಸೊಸೆಯನ್ನು ನೋಡುವಾಗ ಉರಿದು ಬೀಳುವ ಅನೇಕ ಅಹಂಕಾರದ, ಕರುಣೆ ಇಲ್ಲದ ಅತ್ತೆಯರಿಗೆ ಇದೊಂದು ಪಾಠವು ಹೌದು.

ಮುಂಬೈನ ಕಂಡಿಲ್ಲಿಯಲ್ಲಿ ಈ ವಿಶೇಷ ಘಟನೆ ನಡೆದಿದ್ದು, 43 ವರ್ಷದ ಆಮಿಷಾ ಜಿತೇಶ್ ಮೊಟಾ ಅವರು ಕಳೆದ ವರ್ಷ ಕಿಡ್ನಿ ಸಮಸ್ಯೆಗೆ ಗುರಿಯಾಗಿದ್ದರು. ಅನಾರೋಗ್ಯದಿಂದಾಗಿ ಅವರ ಎರಡೂ ಕಿಡ್ನಿ ವೈಫಲ್ಯವಾಗಿತ್ತು.

Viral News

ವೈದ್ಯರು ಆಮಿಷಾ ಅವರಿಗೆ ಕಿಡ್ನಿ ಬದಲಾವಣೆ ಮಾಡಲೇಬೇಕು ಎಂದು ತಿಳಿಸಿದ್ದಾರೆ. ಅದಕ್ಕಾಗಿ ಆಮಿಷಾ ಪತಿ, ಕುಟುಂಬದ ಎಲ್ಲರ ಕಿಡ್ನಿ ಪರಿಶೀಲನೆ ಮಾಡಲಾಗಿದೆ. ಆದರೆ ಯಾರ ಕಿಡ್ನಿಯನ್ನೂ ಆಮಿಷಾ ಅವರಿಗೆ ಹಾಕಲಾಗದು ಎಂದು ವೈದ್ಯರು ತಿಳಿಸಿದ್ದರು. ಇನ್ನು ದಿನೇದಿನೇ ಆಮಿಷಾ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಾ ಹೋಗಿತ್ತು. ಇದನ್ನು ಕಂಡ ಆಕೆಯ ಅತ್ತೆ (ಜಿತೇಶ್ ತಾಯಿ) ಪ್ರಭಾ ಕಂಠಿಲಾಲ್ ಮೊಟಾ ಅವರು ಜಿಗುಪ್ಸೆಗೊಂಡು ತಾವೇ ತಮ್ಮ ಸೊಸೆಗೆ ಕಿಡ್ನಿ ದಾನ ಮಾಡುವುದಾಗಿ ಮುಂದೆ ಬಂದಿದ್ದಾರೆ (Viral News).

ವಯಸ್ಸಾಗಿರುವುದರಿಂದ ನೀವು ಕಿಡ್ನಿ ದಾನ ಮಾಡುವುದು ಬೇಡ ಎಂದು ಕುಟುಂಬಸ್ಥರು ಪ್ರಭಾ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಅದನ್ನು ಕೇಳದ ಪ್ರಭಾ ಅವರು “ಆಮಿಷಾ ನನ್ನ ಮಗಳಿದ್ದಂತೆ, ಮಗಳಿಗಾಗಿ ತಾಯಿ ಏನನ್ನಾದರೂ ಮಾಡಬಲ್ಲಳು” ಎಂದು ಹೇಳಿ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ.

ಆದರೆ ಪ್ರಭಾ ಕಂಠಿಲಾಲ್ ಮೊಟಾ ಅವರ ವಯಸ್ಸು 70ರ ಗಡಿದಾಟಿತ್ತು. ಹೀಗಾಗಿ ಅವರ ಕಿಡ್ನಿ ತೆಗೆದುಕೊಳ್ಳುವುದು ಕಷ್ಟವಾಗಬಹುದು ಎಂದು ವೈದ್ಯರು ಯೋಚಿಸಿದ್ದರು. ವೈದ್ಯಕೀಯ ಪರಿಶೀಲನೆ ಮಾಡಿ ನೋಡಿದಾಗ ಪ್ರಭಾ ಅವರು ಆರೋಗ್ಯವಾಗಿದ್ದು, ಅವರ ಕಿಡ್ನಿಯನ್ನು ದಾನ ಮಾಡಬಹುದು ಎಂದಿದ್ದರು ವೈದ್ಯರು.

ಸದ್ಯ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಪ್ರಭಾ ಅವರ ಕಿಡ್ನಿಯನ್ನು ತೆಗೆದು ಸೊಸೆ ಆಮಿಷಾ ಅವರ ದೇಹಕ್ಕೆ ಜೋಡಿಸಲಾಗಿದೆ. ಸದ್ಯ ಇಬ್ಬರೂ ಆರೋಗ್ಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ. ಸೊಸೆಯನ್ನು ಮಗಳಂತೆ ಕಾಪಾಡಿದ ಪ್ರಭಾ ಅವರ ಈ ಕೆಲಸ ಕುಟುಂಬಸ್ಥರು ಹಾಗೂ ಅವರ ನೆರೆಹೊರೆಯವರು ಪ್ರಭಾ ಅವರು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ದಿನದಂದು ಮನೆಯನ್ನು ಬಲೂನ್ ಮತ್ತು ಹೂವುಗಳಿಂದ ಅಲಂಕರಿಸಿ, ಅವರಿಗೆ ಅದ್ಧೂರಿ ಸ್ವಾಗತ ಮಾಡಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದ್ದು ಅತ್ತೆಯ ಕಾಳಜಿಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಸದ್ಯ ಅವರ ಹಿರಿಯ ಸೊಸೆಯ ಪುಷ್ಪ ಸ್ವಾಗತ ಮತ್ತು ಪೂಜೆಯೊಂದಿಗೆ ಮನೆಗೆ ಮರಳಿದರು. “ನಾನು ಅಮಿಶಾಗೆ ಮೂತ್ರಪಿಂಡವನ್ನು ದಾನ ಮಾಡಲು ನನಗೆ ತುಂಬಾ ಸಂತೋಷವಾಗಿದೆ” “ನನಗೆ ಹೆಣ್ಣು ಮಕ್ಕಳಿಲ್ಲ ಮತ್ತು ನನ್ನ ಮೂವರು ಸೊಸೆಯರನ್ನು ನನ್ನ ಸ್ವಂತ ಮಕ್ಕಳಂತೆ ಪರಿಗಣಿಸಿದ್ದೇನೆ. ಅಮಿಶಾ ಅಳುತ್ತಿದ್ದಾಗ, ಅವಳಿಗೆ ಸಹಾಯ ಮಾಡಲು ನಾನು ಏನಾದರೂ ಮಾಡಬೇಕೆಂದು ನನಗೆ ತಿಳಿದಿತ್ತು, ”ಎಂದು ಪ್ರಭಾ ಅವರು ಹೇಳಿದ್ದಾರೆ.

ಇನ್ನು ಸೊಸೆ ಆಮಿಷ ನನ್ನ ತಾಯಿ ನನಗೆ ಜನ್ಮ ನೀಡಿದರು ಆದರೆ ನನ್ನ ಅತ್ತೆ ನನಗೆ ಮತ್ತೊಂದು ಜೀವನವನ್ನು ಉಡುಗೊರೆಯಾಗಿ ನೀಡಿದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Spandana Vijay Raghavendra: ನಟ ವಿಜಯ್‌ ರಾಘವೇಂದ್ರ ಮೃತದೇಹ ಬೆಂಗಳೂರಿಗೆ ಬರುವ ಸಮಯವೇನು? ಅಂತ್ಯಕ್ರಿಯೆ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ

You may also like