Home » Crime News: ಮದುವೆ ಮನೆಯಲ್ಲಿ ಊಟ ಬಡಿಸುವವನನ್ನೇ ಹೊಡೆದು ಕೊಂದ ಅತಿಥಿಗಳು – ಮರುಕ ಹುಟ್ಟಿಸುತ್ತೆ ಕಾರಣ

Crime News: ಮದುವೆ ಮನೆಯಲ್ಲಿ ಊಟ ಬಡಿಸುವವನನ್ನೇ ಹೊಡೆದು ಕೊಂದ ಅತಿಥಿಗಳು – ಮರುಕ ಹುಟ್ಟಿಸುತ್ತೆ ಕಾರಣ

1 comment
Crime news

Crime News: ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ, ಹೊಟ್ಟೆ ಪಾಡಿಗಾಗಿ ಮದುವೆ ಮನೆಯಲ್ಲಿ ​ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಂದಿರುವ ಘಟನೆ (Crime News) ನಡೆದಿದೆ.

ಮಾಹಿತಿ ಪ್ರಕಾರ, ಪಂಕಜ್ ಅಂಕುರ್ ವಿಹಾರ್‌ನ ಸಿಜಿಎಸ್ ವಾಟಿಕಾದಲ್ಲಿ ಮದುವೆ ಸಮಾರಂಭದಲ್ಲಿ ಆಹಾರವನ್ನು ಸರ್ವ್​ ಮಾಡುತ್ತಿದ್ದಾಗ, ಪಂಕಜ್ ಅವರ ಬಳಿಯಿದ್ದ ಎಂಜಲು ಪ್ಲೇಟ್‌ಗಳು ರಿಷಬ್ ಮತ್ತು ಅವರ ಇಬ್ಬರು ಸ್ನೇಹಿತರಿಗೆ ಅಕಸ್ಮಾತ್ ಆಗಿ ತಾಗಿತ್ತು, ಈ ಹಿನ್ನೆಲೆ ರಿಷಭ್ ಮತ್ತು ಆತನ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಪಂಕಜ್ ನೆಲದ ಮೇಲೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡರು. ಇನ್ನಿಬ್ಬರು ಆರೋಪಿಗಳನ್ನು ಮನೋಜ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.

ಇದನ್ನು ಓದಿ: Gruhalakshmi Scheme : ಯಜಮಾನಿಯರಿಗೆ ಬಿಗ್ ಶಾಕ್- ಗೃಹಲಕ್ಷ್ಮೀ ದುಡ್ಡು ಬರದಿರಲು ಬಯಲಾಯ್ತು ಹೊಸ ಕಾರಣ !!

ನಂತರ ಸಿಕ್ಕಿಬೀಳುವ ಭಯದಿಂದ ರಿಷಬ್ ಮತ್ತು ಅವನ ಸ್ನೇಹಿತರು ಶವವನ್ನು ಹತ್ತಿರದ ಕಾಡಿನಲ್ಲಿ ಬಚ್ಚಿಟ್ಟಿದ್ದರು. ಘಟನೆ ನಡೆದ ಒಂದು ದಿನದ ನಂತರ ಅಂದರೆ ನವೆಂಬರ್ 18 ರಂದು ಪೊಲೀಸರು ಶವವನ್ನು ವಶಪಡಿಸಿಕೊಂಡರು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

You may also like

Leave a Comment