Home » ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕ | ಯುವಕನ ಬರ್ಬರ ಹತ್ಯೆ ಮಾಡಿದ ಯುವತಿ ಕುಟುಂಬಸ್ಥರು

ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕ | ಯುವಕನ ಬರ್ಬರ ಹತ್ಯೆ ಮಾಡಿದ ಯುವತಿ ಕುಟುಂಬಸ್ಥರು

0 comments

ಅವರಿಬ್ಬರೂ ಕಾಲೇಜಿನ ದಿನಗಳಿಂದಲೂ ಪ್ರೀತಿಸುತ್ತಿದ್ದರು. ಆತ ಹಿಂದೂ. ಆಕೆ ಮುಸ್ಲಿಂ. ಆದರೆ ಅವರಿಬ್ಬರ ಪ್ರೀತಿಗೆ ಧರ್ಮ ಮಾತ್ರ ಅಡ್ಡ ಬಂದಿಲ್ಲ. ಆದರೆ ಇವರಿಬ್ಬರ ಮದುವೆಗೆ ಕುಟುಂಬದವರು ಒಪ್ಪಿಗೆ ನೀಡಿಲ್ಲ. ಹಾಗಾಗಿ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ. ಅವರಷ್ಟಕ್ಕೇ ಎಲ್ಲೋ ಒಂದು ಕಡೆ ಸಂಸಾರ ಮಾಡ್ತಾ ಇದ್ದರು.ಆದರೆ ಇವರನ್ನು ಹುಡುಕಿಕೊಂಡು ಬಂದ ಯುವತಿ ಕಡೆಯವರು ಯುವಕನನ್ನು ಕೊಚ್ಚಿ ಕೊಂದಿದ್ದಾರೆ. ಹೌದು ಇಂತಹ ಒಂದು ಭೀಭತ್ಸ್ಯ ಕೃತ್ಯ ಹೈದರಾಬಾದ್ ನಲ್ಲಿ ನಡೆದಿದೆ.

ಇದು ಮರ್ಯಾದಾ ಹತ್ಯೆ. ಕುಟುಂಬದವರ ಅನುಮತಿ ಇಲ್ಲದೇ ಮದುವೆಯಾಗಿದ್ದಕ್ಕೆ ಈ ಬರ್ಬರ ಹತ್ಯೆ ನಡೆದಿದೆ ಎನ್ನಲಾಗಿದೆ.

ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ ಮೃತ ವ್ಯಕ್ತಿ. ನಾಗರಾಜ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ವಿನ್ ಸುಲ್ತಾನಾ ಎಂಬುವವಳನ್ನು ಪ್ರೀತಿಸಿ ವಿವಾಹವಾಗಿದ್ದ. ಇದು ಎರಡೂ ಕುಟುಂಬಗಳ ವಿರೋಧಕ್ಕೆ ಕಾರಣವಾಗಿತ್ತು.

ಅಶ್ಲೀನ್ ಳನ್ನು ಮದುವೆಯಾಗಲು ನಿರ್ಧರಿಸಿದ ನಾಗರಾಜ್, ಕೆಲ ತಿಂಗಳ ಹಿಂದೆ ಹೈದರಾಬಾದ್‌ನ ಕಾರು ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ. ಬಳಿಕ ಇಬ್ಬರೂ ಜನವರಿ 31 ರಂದು ಗೌಪ್ಯವಾಗಿ ಲಾಲ್ ದರ್ವಾಜಾದ ಆರ್ಯ ಸಮಾಜದಲ್ಲಿ ವಿವಾಹವಾಗಿ ಬಳಿಕ ಹೈದರಾಬಾದ್ ನಲ್ಲಿ ರಹಸ್ಯವಾಗಿ ಜೀವನ ಸಾಗಿಸುತ್ತಿದ್ದರು.

ಹೈದರಾಬಾದಿನ ಸರೂರ್‌ನಗರ ತಹಶೀಲ್ದಾರ್ ಕಚೇರಿ ಬಳಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ನಾಗರಾಜ್ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಶೀನ್ ಸಹೋದರ ಮತ್ತು ಆತನ ಸ್ನೇಹಿತ ಬೈಕ್‌ನಲ್ಲಿ ಹಿಂಬಾಲಿಸಿ ಬಂದು ನಾಗರಾಜುವಿನ ಮೇಲೆ ಹಲ್ಲೆ ಮಾಡಿದ್ದಾರೆ. ನಾಗರಾಜ್ ಮೇಲೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಲ್ಲದೇ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಗಂಡಿನ ಮನೆಯವರು ಕರೆದುಕೊಂ ಹೋಗಿದ್ದಾರೆ. ಸ್ಥಳದಲ್ಲಿದ್ದವರು ಈ ಘಟನೆಯ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

You may also like

Leave a Comment