Home » ಹತ್ತು ಮಂದಿ ಮುಸ್ಲಿಂ ಯುವತಿಯರನ್ನು ಹಾರಿಸಿಕೊಂಡು ಹೋಗಿ!!! ಹಿಂದೂ ಯುವಕರಿಗೆ ಬಹಿರಂಗ ಕರೆ ಕೊಟ್ಟ ಮುತಾಲಿಕ್

ಹತ್ತು ಮಂದಿ ಮುಸ್ಲಿಂ ಯುವತಿಯರನ್ನು ಹಾರಿಸಿಕೊಂಡು ಹೋಗಿ!!! ಹಿಂದೂ ಯುವಕರಿಗೆ ಬಹಿರಂಗ ಕರೆ ಕೊಟ್ಟ ಮುತಾಲಿಕ್

0 comments

ಗದಗ: ಇನ್ನು ಮುಂದೆ ಒಬ್ಬನೇ ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಕರೆದುಕೊಂಡು ಹೋದರೆ, ನೀವು ಹತ್ತು ಮಂದಿ ಮುಸ್ಲಿಂ ಯುವತಿಯರನ್ನು ಹಾರಿಸಿಕೊಂಡು ಹೋಗಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಂದೂ ಯುವಕರಿಗೆ ಬಹಿರಂಗವಾಗಿ ಕರೆ ನೀಡಿದ್ದಾರೆ.

ಗದಗ ಜಿಲ್ಲೆಯಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಅವರು, ಮುಸ್ಲಿಂ ಸಮುದಾಯದ ಯುವಕರು ಪದೇ ಪದೇ ಹಿಂದೂ ಯುವತಿಯರನ್ನು ಮೋಸದ ಬಲೆಯಲ್ಲಿ ಬೀಳಿಸುತ್ತಿದ್ದಾರೆ.ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ,ಹಿಂದೂ ಶಕ್ತಿ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ.ಅಂತಹ ಟಿಪ್ಪು, ಬಾಬರ್ ಹಾಗೂ ಗೋರಿ,ಘಜನಿಗಳನ್ನು ಗೋರಿ ಮಾಡಿದ್ದೇವೆ ಎಂದು ಗುಡುಗಿದರು.

ಅದಲ್ಲದೇ ಶಾಸಕ ಜಮೀರ್ ಅವರ ಕಾಲೆಳೆದ ಮುತಾಲಿಕ್ ಏಕವಚನದಲ್ಲಿಯೇ ಮಾತನಾಡಿದ್ದು, ಕಲ್ಲಂಗಡಿ ಹಣ್ಣಿನ ಬಗ್ಗೆ ಮಾತನಾಡುವ ನೀನು, ಚಂದ್ರು ಕೊಲೆಯ ಬಗ್ಗೆ ಮೌನ ವಹಿಸಿದ್ದಿ, ಮುಸ್ಲಿಂಮರನ್ನು ಬಚಾವ್ ಮಾಡಲು ಎಲ್ಲಾ ಪ್ಲಾನ್ ಮಾಡ್ತಿದ್ದಿ ನಾಚಿಕೆ ಆಗ್ಬೇಕು ಎಂದು ತರಾಟೆಗೆ ತೆಗೆದುಕೊಂಡರು.

You may also like

Leave a Comment