Home » ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ

by Praveen Chennavara
0 comments

ಸವಣೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ(ವಲ್ಮೀಕ) ಆರಾಧನೆ ನಡೆಯುವ ಏಕೈಕ ದೇವಳವಾದ ಕೊಳ್ತಿಗೆ ಗ್ರಾಮದ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು.

ಡಿ.8 ರಂದು ರಾತ್ರಿ ವಿಶೇಷ ಕಾರ್ತಿಕಪೂಜೆ ನಡೆಯಿತು. ಡಿ.9ರಂದು ಚಂಪಾಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ, ನಾಗತಂಬಿಲ,ಕಾರ್ತಿಕ ಪೂಜೆ ಅನ್ನಸಂತರ್ಪಣೆ ಸೇವೆ ನಡೆಯಿತು.ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಹಾಗೂ ಮೊಕ್ತೇಸರರಾದ ಮೋಹನ್‌ದಾಸ್ ರೈ,ಡಾ.ಸುಚೇತಾ ಜೆ.ಶೆಟ್ಟಿ,ನಾರಾಯಣ ರೈ ಮೊದೆಲ್ಕಾಡಿ,ಎನ್ ಚಂದ್ರಶೇಖರ್ ರೈ, ಕಿಶೋರ್ ಕುಮಾರ್ ,ಅರುಣ್ ಕುಮಾರ್,ಸತೀಶ್ ರೈ,ಪ್ರವೀಣ್ ಕುಮಾರ್, ಗಿರಿಜಾ ಎಸ್ ರೈ,ಶ್ರೀನಿವಾಸ್ ಹೆಬ್ಬಾರ್, ಅರ್ಚಕ ಹರಿನಾರಾಯಣ ಮನೋಳಿತ್ತಾಯ ಉಪಸ್ಥಿತರಿದ್ದರು.

You may also like

Leave a Comment