Bhagalpur: ಶಾಲೆ ಎನ್ನುವುದು ದೇಗುಲಕ್ಕೆ ಸಮಾನ ಎನ್ನುವ ಮಾತೊಂದಿತ್ತು. ಆದರೆ ಬರಬರುತ್ತಾ ಈ ಮಾತು ಸುಳ್ಳಾಗುತ್ತಿದೆಯೇನೋ ಅನಿಸುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಲಿಸಲು ಹಿಂದೇಟು ಹಾಕುವ ದಿನ ಮುಂದೆ ಬರಬಹುದೇನೋ ಎಂಬ ಮಾತೊಂದು ಕೇಳಿ ಬರುತ್ತಿದೆ. ಈ ಮಾತು ಯಾಕೆ ಹೇಳುತ್ತಾ ಇದ್ದೀವಿ ಎಂದರೆ ಇಲ್ಲೊಂದು ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೋರ್ವಳ ಮೇಲೆ ಅದೇ ಶಾಲೆಯ ಇಬ್ಬರು ಶಿಕ್ಷಕರು ಸೇರಿ 14 ವರ್ಷದ ಆ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವಂತಹ ಘಟನೆಯೊಂದು ನಡೆದಿದೆ. ಈ ಘಟನೆ ಬಿಹಾರದ ಭಾಗಲ್ಪುರದ( Bhagalpur)ಪ್ರಸಿದ್ಧ ಶಾಲೆಯಲ್ಲಿ ನಡೆದಿದೆ.
ಜತೆಗೆ ಈಗ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಘಟನೆ ಬಳಿಕ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ತಂದೆಯ ಲಿಖಿತ ದೂರಿನಲ್ಲಿ, ತನ್ನ 14 ವರ್ಷದ ಮಗಳನ್ನು ಇಬ್ಬರೂ ಶಿಕ್ಷಕರು ಸರದಿಯಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶಿಕ್ಷಕರ ದಿನಾಚರಣೆಯ ಸಿದ್ಧತೆಗಾಗಿ ನಮ್ಮ ಮಗಳು ಆ.27 ರಂದು ಶಾಲೆಗೆ ಹೋಗಿದ್ದಳು. ಈ ವೇಳೆ ಕ್ರೀಡಾ ಶಿಕ್ಷಕರಾದ ಮುಖೇಶ್ ಕುಮಾರ್ ಮತ್ತು ಪ್ರಿನ್ಸ್ ಯಾದವ್ ಇವರಿಬ್ಬರು ನಮ್ಮ ಮಗಳಿಗೆ ಕರೆ ಮಾಡಿ ಸಂಬಂಧ ಬೆಳೆಸುವಂತೆ ಒತ್ತಡ ಹಾಕಿದ್ದರು. ಸೆ.1 ರಂದು ಇಬ್ಬರು ಮತ್ತೆ ಕರೆ ಮಾಡಿದ್ದಾರೆ. ಇದಾದ ಬಳಿಕ ಪ್ರಿನ್ಸ್ ಯಾದವ್ ಆಕೆಯನ್ನು ಕ್ರೀಡಾ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಹೇಗೋ ಅಲ್ಲಿಂದ ಓಡಿ ಹೋಗಿದ್ದಾಳೆ. ಸೆಪ್ಟೆಂಬರ್ 12 ರಂದು, ಇಬ್ಬರೂ ಶಿಕ್ಷಕರು ಮತ್ತೆ ಅವರನ್ನು ಕ್ರೀಡಾ ಕೋಣೆಗೆ ಕರೆದರು. ಅಲ್ಲಿ ಮುಖೇಶ್ ಕುಮಾರ್ ಕೋಣೆಗೆ ಬೀಗ ಹಾಕಿ, ಮತ್ತು ಪ್ರಿನ್ಸ್ ಯಾದವ್ ಕೋಣೆಯ ಹೊರಗೆ ನಿಗಾ ವಹಿಸಲು ಪ್ರಾರಂಭಿಸಿದರು. ಮುಖೇಶ್ ಕುಮಾರ್ ಸಂತ್ರಸ್ತೆಯ ಜೊತೆ ಕೋಣೆಯಲ್ಲಿ ರೇಪ್ ಮಾಡಿದ್ದಾನೆ ಎಂದು ದೂರಿನಲ್ಲಿ ಬರೆಯಲಾಗಿದೆ.
ಈ ಘಟನೆಯು ನಿರಂತರವಾಗಿ ನಡೆದ ಕಾರಣ, ಅನಂತರ ವಿದ್ಯಾರ್ಥಿನಿ ಖಿನ್ನತೆಗೆ ಒಳಗಾಗಿದ್ದಳು. ಮನೆಯಲ್ಲಿ ಮೌನವಾಗಿದ್ದ, ಈಕೆಯನ್ನು ಪೋಷಕರು ಪದೇ ಪದೇ ಕೇಳಿದಾಗ ತನಗೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಇದನ್ನು ಕೇಳಿ ಕುಟುಂಬಸ್ಥರು ಬೆಚ್ಚಿಬಿದ್ದರು. ಇದಾದ ಬಳಿಕ ಕುಟುಂಬದವರು ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೌರ್ಜನ್ಯದ ಬಗ್ಗೆ ಮನೆಯವರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಶಾಲೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿ ಶಿಕ್ಷಕರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಶಾಲಾ ಶಿಕ್ಷಕಿಗೆ ಧಮ್ಕಿ ಹಾಕಿದ ಸ್ನೇಹಿತ! ಖಾಸಗಿ ವೀಡಿಯೋ ಲೀಕ್, ಪತಿಯನ್ನು ಬಿಟ್ಟು ಬಾ ಎಂದು ಬೆದರಿಕೆ!!!
