Home » Paytm offer: ಪೇಟಿಎಂ ಮೂಲಕ ಈ ದಿನಸಿ ವಸ್ತುಗಳಿಗೆ ಸಿಗ್ತಿದೆ ಭರ್ಜರಿ ಆಫರ್ ! ಮುಗಿಬಿದ್ದ ಜನ

Paytm offer: ಪೇಟಿಎಂ ಮೂಲಕ ಈ ದಿನಸಿ ವಸ್ತುಗಳಿಗೆ ಸಿಗ್ತಿದೆ ಭರ್ಜರಿ ಆಫರ್ ! ಮುಗಿಬಿದ್ದ ಜನ

0 comments
Paytm offer

Paytm offer: ಯಾವುದೇ ಮನೆಯ ವಸ್ತುಗಳನ್ನು ಪೇಟಿಎಂ ಪೇ ಮೆಂಟ್ ಮೂಲಕ ಆರ್ಡರ್ ಮಾಡುತ್ತೇವೆ. ಇದೀಗ mಗ್ರಾಹಕರಿಗೆ Paytm ಬಂಪರ್ ಸುದ್ದಿ ನೀಡಿದ್ದು, ದಿನಸಿ ವಸ್ತುಗಳಿಗೆ ಭರ್ಜರಿ ಆಫರ್(Paytm offer) ನೀಡಿದೆ. ಹೌದು, ಈರುಳ್ಳಿ, ಕಡಲೆ ಬೇಳೆ, ಸಾಬೂನು ಮತ್ತು ಇತರ ವಸ್ತುಗಳ ಮೇಲೆ ಪೇಟಿಎಂ ರಿಯಾಯಿತಿ ನೀಡುತ್ತಿದೆ. ಮೊದಲ ಬಾರಿಗೆ ಬಳಕೆದಾರರಿಗೆ ಪೇಟಿಎಂ ವಿಶೇಷ ಕೊಡುಗೆ ನೀಡಿದೆ.

ಫಿನ್ನೆಕ್ ದೈತ್ಯ ಪೇಟಿಎಂ ಸರ್ಕಾರಿ ಬೆಂಬಲಿತ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್) ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಈರುಳ್ಳಿ ಮತ್ತು ಬೇಳೆಕಾಳುಗಳು ಸೇರಿದಂತೆ ದಿನಸಿ ವಸ್ತುಗಳನ್ನು ಪೇಟಿಎಂ ಸೆ ಒಎನಿಸಿ ನೆಟ್ವರ್ಕ್ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಪ್ರಸ್ತುತ, ಪೇಟಿಎಂ 2 ಕೆಜಿ ಕಡಲೆ ಬೇಳೆ ಮಾರಾಟಕ್ಕೆ 120 ರೂ., ದೆಹಲಿಯಲ್ಲಿ ಈರುಳ್ಳಿ 2 ಕೆಜಿಗೆ 50 ರೂ.ಗೆ ಮಾರಾಟವಾಗುತ್ತಿದೆ.

ಪೇಟಿಎಂ ಬಳಕೆದಾರರು ಆಶಿರ್ವಾದ್ ಆಟ್ಟಾ ದಲ್ಲಿ 135 ರೂ. ರಿಯಾಯಿತಿಯನ್ನು ಸಹ ಪಡೆಯಬಹುದು. ಫಿನ್ಸೆಕ್ ದೈತ್ಯ ತನ್ನ ಒಎನಿಸಿ ನೆಟ್ವರ್ಕ್ ನಿಂದ ಸನ್ಪೀಸ್ಟ್ ಬಿಸ್ಕತ್ತುಗಳು, ಸಾವ್ಹಾನ್ ಸಾಬೂನುಗಳು ಮತ್ತು ಸ್ಟೇಷನರಿ ಉತ್ಪನ್ನಗಳು ಸೇರಿದಂತೆ ಇತರ ಅಗತ್ಯ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುತ್ತಿದೆ.

ಮುಖ್ಯವಾಗಿ ಪೇಟಿಎಂ ಮೊದಲಬಾರಿಗೆ ಬಳಕೆದಾರರಿಗೆ ‘WELCOME100’ ಕೋಡ್ ಅನ್ನು ಪ್ರಾರಂಭಿಸಿದೆ. ಈ ಕೋಡ್ ಗ್ರಾಹಕರಿಗೆ 200 ರೂ.ಗಿಂತ ಹೆಚ್ಚಿನ ಆರ್ಡರ್ ಗಳಿಗೆ 100 ರೂ.ಗಳ ರಿಯಾಯಿತಿ ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಯೋಜನೆಯಡಿ ದಿನಂಪ್ರತಿ 7 ರೂ ಹೂಡಿಕೆ ಮಾಡಿ, 5,000 ಪಿಂಚಣಿ ಪಡೆಯಿರಿ !! ಸರ್ಕಾರ ಕೊಡ್ತು ಬಿಗ್ ಆಫರ್

You may also like

Leave a Comment