Chhatrapati Shivaji Maharaj: ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಅತ್ಯಂತ ವಿಶೇಷ ಆಯುಧ ‘ವಾಘ್ ನಾಖ್’ ನೂರಾರು ವರ್ಷಗಳ ನಂತರ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ. ವೀರ ಶಿವಾಜಿ ಅಫ್ಜಲ್ ಖಾನ್ ನನ್ನು ಕೊಂದಿದ್ದ ವಾಘ್ ನಾಖ್ ಭಾರತಕ್ಕೆ ಮರಳುತ್ತಿದೆ. ಲಂಡನ್ ಮ್ಯೂಸಿಯಂನಿಂದ ಭಾರತಕ್ಕೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಹೌದು, 350 ವರ್ಷಗಳ ನಂತರ ಮರಾಠ ಸಾಮ್ರಾಜ್ಯದ ಪಿತಾಮಹ ಛತ್ರಪತಿ ಶಿವಾಜಿ ಮಹಾರಾಜರ ಸಾಂಪ್ರದಾಯಿಕ ‘ಹುಲಿ ಪಂಜ’ ಲಂಡನ್‌ನಿಂದ ಭಾರತಕ್ಕೆ ವಾಪಾಸ್ ಬರಲಿದೆ. ಸದ್ಯ ಲಂಡನ್‌ನಿಂದ ಮಹಾರಾಷ್ಟ್ರಕ್ಕೆ ಮರಳಲು ಸಿದ್ಧವಾಗಿದೆ.
ಈಸ್ಟ್ ಇಂಡಿಯಾ ಕಂಪನಿಯು 1820 ರ ದಶಕದಲ್ಲಿ ಭಾರತೀಯ ಉಪಖಂಡದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿಜಯದ ಸಮಯದಲ್ಲಿ ಅದನ್ನು ಇಂಗ್ಲೆಂಡ್‌ಗೆ ಕೊಂಡೊಯ್ದಿದ್ದರು. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಹುಲಿ ಪಂಜದ ಆಯುಧವನ್ನು ಮರಳಿ ತರಲಾಗುತ್ತಿದೆ.
ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂಟೆವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂನಲ್ಲಿ ‘ವಾಘ್ ನಾಖ್ ಅನ್ನು ಇರಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: Burhanpur : ಬಿಜೆಪಿ ಬೆಂಬಲಿತ ಪಂಚಾಯ್ತಿ ಅಧ್ಯಕ್ಷೆ ಆತ್ಮಹತ್ಯೆ !! ಕಾರಣ ಕೇಳಿದ್ರೆ ಶಾಕ್
