Home » Double Murder: ಇಬ್ಬರು ಪುಟ್ಟ ತಂಗಿಯರ ರುಂಡ ಚೆಂಡಾಡಿದ 18ರ ಅಕ್ಕ !! ಅಯ್ಯೋ ದೇವ್ರೇ.. ಏನಿದು ಹೇಯ ಕೃತ್ಯ ?!

Double Murder: ಇಬ್ಬರು ಪುಟ್ಟ ತಂಗಿಯರ ರುಂಡ ಚೆಂಡಾಡಿದ 18ರ ಅಕ್ಕ !! ಅಯ್ಯೋ ದೇವ್ರೇ.. ಏನಿದು ಹೇಯ ಕೃತ್ಯ ?!

1 comment
Double Murder

Double Murder: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವತಿಯೊಬ್ಬಳು(18)ತನ್ನ 6 ಮತ್ತು 4 ವರ್ಷ ವಯಸ್ಸಿನ ಇಬ್ಬರು ತಂಗಿಯರನ್ನು ಕೊಂದು (Double Murder) ಅವರ ತಲೆ ಕತ್ತರಿಸಿ (beheading) ಬೇರೆ ರೂಮಿನಲ್ಲಿ ಬಚ್ಚಿಟ್ಟ ಹೇಯ ಕೃತ್ಯ ವರದಿಯಾಗಿದೆ.

ಇಟಾವಾ ಜಿಲ್ಲೆಯ ಬಲರಾಯ ಪೊಲೀಸ್ ಠಾಣೆ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಜೈವೀರ್ ಸಿಂಗ್ ಎಂಬುವವರ ಪುತ್ರಿ ಅಂಜಲಿ ಪಾಲ್(18)ತನ್ನ ಆರು ಮತ್ತು ನಾಲ್ಕು ವರ್ಷದ ಇಬ್ಬರು ಸಹೋದರಿಯರನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಮಕ್ಕಳ ಶವಗಳು ಮನೆಯಲ್ಲಿ ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರನ್ನು ಆರು ವರ್ಷದ ಸುರಭಿ ಮತ್ತು ನಾಲ್ಕು ವರ್ಷದ ರೋಶ್ನಿ ಎಂದು ಗುರುತಿಸಲಾಗಿದೆ. ಮಕ್ಕಳ ಛಿದ್ರಗೊಂಡ ದೇಹಗಳು ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿದೆ. ಈ ಘಟನೆ ನಡೆದ ಸಂದರ್ಭ ಜೈವೀರ್, ಅವರ ಪತ್ನಿ ಸುಶೀಲಾ, ಅವರ ಮಕ್ಕಳಾದ ನಂದ ಕಿಶೋರ್ (12) ಮತ್ತು ಕನ್ಹಯ್ಯಾ (8) ಮನೆಯಲ್ಲಿರಲಿಲ್ಲ. ಯುವತಿ ಕೊಲೆಗೆ ಆಯುಧವಾಗಿ ತಂದೆಯ ಗುದ್ದಲಿಯನ್ನು ಬಳಕೆ ಮಾಡಿದ್ದಾಳೆ ಎನ್ನಲಾಗಿದೆ. ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದು,ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯವನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಕುರಿತಂತೆ ಆರೋಪಿ ಯುವತಿಯೊಂದಿಗೆ ಮೂವರು ಪುರುಷರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Mangalore: ಮೀನುಗಾರಿಕಾ ಬೋಟ್ ನಲ್ಲಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಅನಾಹುತ!

You may also like

Leave a Comment