Home » KSRTC ನೌಕರರಿಗೆ ʼಗೌರಿ-ಗಣೇಶʼ ಹಬ್ಬದಂದೇ ಸಿಕ್ಕಿದೆ ಭರ್ಜರಿ ಗುಡ್‌ನ್ಯೂಸ್‌!! ಹೆಚ್ಚುವರಿ ವೇತನಕ್ಕೆ ಆದೇಶ!

KSRTC ನೌಕರರಿಗೆ ʼಗೌರಿ-ಗಣೇಶʼ ಹಬ್ಬದಂದೇ ಸಿಕ್ಕಿದೆ ಭರ್ಜರಿ ಗುಡ್‌ನ್ಯೂಸ್‌!! ಹೆಚ್ಚುವರಿ ವೇತನಕ್ಕೆ ಆದೇಶ!

by Mallika
1 comment
KSRTC salary

KSRTC salary: ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ರಜಾದಿನದಂದು ಕರ್ತವ್ಯ ನಿರ್ವಹಿಸಿದ್ದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುಡ್‌ನ್ಯೂಸ್‌ ನೀಡಿದೆ. ರಜಾ ದಿನದಂದು ಕರ್ತವ್ಯ ನಿರ್ವಹಿಸಿದವರಿಗೆ ಹೆಚ್ಚುವರಿ ವೇತನ( KSRTC salary) ಪಾವತಿ ಮಾಡುವಂತೆ ಸೂಚನೆಯೊಂದನ್ನು ನೀಡಿದೆ.

ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನದ ಬದಲಾಗಿ ಪರಿಹಾರ ರಜೆ ನೀಡಲು ಉಲ್ಲೇಖ ಪತ್ರ-1 ರಂತೆ ನಿರ್ದೇಶನಗಳನ್ನು ನೀಡಲಾಗಿತ್ತು. ಇದು ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದಾಗಿ ನಿಗಮದ ಸಾರಿಗೆ ಆದಾಯ ಹಾಗೂ ಇತರ ಆದಾಯವು ಕುಂಠಿತವಾಗಿದ್ದ ಹಿನ್ನೆಲೆಯಲ್ಲಿ ನೀಡಲಾಗಿತ್ತು.

ಈಗ ಶಕ್ತಿ ಯೋಜನೆ ಜಾರಿಯಲ್ಲಿರುವ ಕಾರಣ ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿರುವ ಕಾರಣ ಎಲ್ಲಾ ವಾಹನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಹೆಚ್ಚುವರಿ ವೇತನವನ್ನು ಪಾವತಿಸುವುದು ಹಾಗೂ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿ ನಿಯೋಜನೆ ಮಾಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ: SBI Recruitment 2023: ಎಸ್‌ಬಿಐ ನಲ್ಲಿ 439 ವಿವಿಧ ಹುದ್ದೆಗಳು; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ, ಇಲ್ಲಿದೆ ಸಂಪೂರ್ಣ ವಿವರ!!!

You may also like

Leave a Comment