Haryana Pran Vayu Devta Pension: ಹರಿಯಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲ್ಲು ಸುಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ ಅನೇಕ ನಗರಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಸರ್ಕಾರವು 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯನ್ನು (Haryana Pran Vayu Devta Pension)ಆರಂಭಿಸಲು ಮುಂದಾಗಿದೆ.
ಹರಿಯಾಣದಲ್ಲಿ ನವೆಂಬರ್ 1ರಿಂದ ಮರ ಪಿಂಚಣಿ ಆರಂಭವಾಗಲಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿಗೆ ಸರ್ಕಾರವು ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಆರಂಭಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಸುಮಾರು 4 ಸಾವಿರ ಮರಗಳನ್ನು ಗುರುತಿಸಲಾಗಿದೆ. ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಪರಿಸರವನ್ನು ಉಳಿಸುವ ದೃಷ್ಟಿಯಿಂದ ಪ್ರಮುಖ ಉಪಕ್ರಮವೆಂದು ಪರಿಗಣಿಸಲಾಗಿದ್ದು, ಹರಿಯಾಣ ಜಾರಿಗೆ ತರಲಿರುವ ಈ ಯೋಜನೆ ಇತರ ರಾಜ್ಯಗಳಿಗೂ ಮಾದರಿಯಾಗಲಿದೆ.
ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯ ಅನುಸಾರ, ಮನೆಯ ವ್ಯಾಪ್ತಿಯಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ, ಮನೆಯ ಮಾಲೀಕರಿಗೆ ಪಿಂಚಣಿ ಪ್ರಯೋಜನ ಸಿಗಲಿದೆ. ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಮರವಿದ್ದಲ್ಲಿ ಅದರ ಪ್ರಯೋಜನ ಗ್ರಾಮ ಪಂಚಾಯಿತಿಗೆ ಸಿಗಲಿದೆ. ಜಮೀನಿನಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ ಅದರ ಲಾಭ ರೈತನಿಗೆ ದೊರೆಯಲಿದ್ದು, ನಗರದಲ್ಲಿ ಹಳೆಯ ಮರವಿದ್ದರೆ ಅದರ ಲಾಭ ಸ್ಥಳೀಯ ಆಡಳಿತದ ಪಾಲಾಗಲಿದೆ. ಇದೇ ವೇಳೆ, ಅರಣ್ಯ ಪ್ರದೇಶದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಮರವಿದ್ದರೆ ಅರಣ್ಯ ಇಲಾಖೆಯ ಈ ಪಿಂಚಣಿ ಯೋಜನೆಯ ಲಾಭ ದೊರೆಯಲಿದೆ. ಪಿಂಚಣಿ ಯೋಜನೆಯಡಿ ವಾರ್ಷಿಕ 2,750 ರೂ. ಟ್ರೀ ಪೆನ್ಷನ್ ನೀಡುವ ದೇಶದ ಮೊದಲ ರಾಜ್ಯ ಹರಿಯಾಣವೆಂದು ಹರ್ಯಾಣ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್ಪಾಲ್ ಗುರ್ಜರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Shakti Yojana: ಶಕ್ತಿ ಯೋಜನೆ ಎಫೆಕ್ಟ್ – 300 ಜನ ಕಂಡಕ್ಟರ್ಸ್ ಸಸ್ಪೆಂಡ್ !! ಏನಿದು ಶಾಕಿಂಗ್ ನ್ಯೂಸ್?!
