New Tax Rule: ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಉಳಿತಾಯ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ ನೆರವಾಗುತ್ತದೆ.
ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ(LIC) ತನ್ನ ಗ್ರಾಹಕರಿಗೆ ಉಳಿತಾಯ ಮತ್ತು ಭದ್ರತಾ ಪ್ರಯೋಜನಗಳನ್ನು ನೀಡುವ ಹಲವಾರು ಯೋಜನೆಗಳನ್ನು ನೀಡುತ್ತದೆ. LIC ಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ವಿನಾಯಿತಿ ಪಡೆಯಬಹುದು.ವರ್ಷಕ್ಕೆ 5 ಲಕ್ಷ ರೂಗಿಂತ ಕಡಿಮೆ ಪ್ರೀಮಿಯಮ್ ಇರುವ ಇನ್ಷೂರೆನ್ಸ್ ಪಾಲಿಸಿಗಳ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿನಾಯಿತಿ ದೊರೆಯಲಿದೆ.
ತೆರಿಗೆ ಉಳಿಸಲು ವಿಮಾ ಪಾಲಿಸಿ (Life Insurance Schemes)ಹೆಸರಲ್ಲಿ ಹೂಡಿಕೆ ಸ್ಕೀಮ್ಗಳು ಚಾಲನೆಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಸರ್ಕಾರ ಹೊಸ ನಿಯಮವೊಂದನ್ನು(New Tax Rule) ರೂಪಿಸಲಾಗಿದೆ. ಹೆಚ್ಚು ಪ್ರೀಮಿಯಮ್ ಇರುವ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಿಂದ ಬರುವ ಆದಾಯವನ್ನು ತೆರಿಗೆ ಗುಂಪಿಗೆ ಸೇರಿಸಲು ತೀರ್ಮಾನ ಮಾಡಲಾಗಿದೆ.
5 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಪ್ರೀಮಿಯಮ್ ಇರುವ ಇನ್ಷೂರೆನ್ಸ್ ಪಾಲಿಸಿಯ (Life Insurance Policy) ಆದಾಯಕ್ಕೆ ತೆರಿಗೆ ಆದಾಯ ತೆರಿಗೆ ನಿಯಮಗಳ ಕಾಯ್ದೆ ಅಡಿ 11ಯುಎಸಿಎ ಎಂಬ ಹೊಸ ನಿಯಮವನ್ನು ಸಿಬಿಡಿಟಿ ಇತ್ತೀಚೆಗೆ ಸೇರ್ಪಡೆ ಮಾಡಿದೆ. ಸರ್ಕಾರ ವಿಧಿಸುವ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಕೆಲ ವಿಧಾನಗಳಿವೆ. ಇನ್ಷೂರೆನ್ಸ್ ಪಾಲಿಸಿ, ಪಿಪಿಎಫ್ ಈ ರೀತಿ ಪಾಲಿಸಿ ಮೂಲಕ ಜನರನ್ನು ಮರುಳು ಮಾಡಲು ಇನ್ಷೂರೆನ್ಸ್ ಪಾಲಿಸಿ ಸೋಗಿನಲ್ಲಿ ಹೂಡಿಕೆಗಳನ್ನು ಕೆಲ ಕಂಪನಿಗಳು ಆಫರ್ ಮಾಡುತ್ತಿದ್ದು, ಇವು ಇನ್ಷೂರೆನ್ಸ್ ಹೆಸರಿನಲ್ಲಿ ಇರುವ ಹೂಡಿಕೆ ಸ್ಕೀಮ್ಗಳಾಗಿವೆ. ಹೂಡಿಕೆ ಸ್ಕೀಮ್ ಆದರೆ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಸುಳ್ಳು ಹೇಳಿ ಇನ್ಷೂರೆನ್ಸ್ ಪ್ಲಾನ್ ಎಂದು ಮೋಸ ಮಾಡುವುದನ್ನು ತಪ್ಪಿಸಲು ಹೊಸ ಪ್ಲಾನ್ ಮಾಡಲಾಗಿದೆ.
ಈ ರೀತಿಯ ಇನ್ಸೂರೆನ್ಸ್ ದುರ್ಬಳಕೆಯನ್ನು ತಡೆಯಲು ಸಿಬಿಡಿಟಿ ಈಗ ತೆರಿಗೆ ನಿಯಮ ಬದಲಾಯಿಸಿದೆ. ಒಂದು ವರ್ಷದಲ್ಲಿ ನೀವು ಕಟ್ಟುವ ಪ್ರೀಮಿಯ್ಗಳು 5 ಲಕ್ಷ ಮೀರಿದ್ದಲ್ಲಿ, ಆ ಇನ್ಷೂರೆನ್ಸ್ ಪಾಲಿಸಿಯ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ. ವರ್ಷಕ್ಕೆ 5 ಲಕ್ಷ ರೂಗಿಂತ ಹೆಚ್ಚು ಪ್ರೀಮಿಯಮ್ ಹಣ ಇರುವ ಹಾಗೂ 2023ರ ಏಪ್ರಿಲ್ 1ರಿಂದ ನೀಡಲಾಗುವ ಜೀವ ವಿಮಾ ಪಾಲಿಸಿ ಮೆಚ್ಯೂರಿಟಿ ಆದ ನಂತರ ಅದರ ಅದಾಯಕ್ಕೆ ತೆರಿಗೆ ಕಟ್ಟಬೇಕು.
ನೀವು 5 ಲಕ್ಷ ರೂಗಿಂತ ಕಡಿಮೆ ವಾರ್ಷಿಕ ಪ್ರೀಮಿಯಮ್ ಇರುವ ಪಾಲಿಸಿ ಹೊಂದಿದ್ದರೆ ತೆರಿಗೆ ವಿನಾಯಿತಿ ಸೌಲಭ್ಯ ದೊರೆಯಲಿದೆ. ಅದಕ್ಕಿಂತ ಹೆಚ್ಚು ಪ್ರೀಮಿಯಮ್ ಇರುವ ಪಾಲಿಸಿಗಳ ಮೆಚ್ಯೂರಿಟಿ ಹಣವನ್ನು ವ್ಯಕ್ತಿಯ ಆದಾಯದ ಭಾಗವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಆ ವ್ಯಕ್ತಿಯ ಆದಾಯ ಗುಂಪಿಗೆ ಅನುಗುಣವಾಗಿ ತೆರಿಗೆ ಅನ್ವಯವಾಗುತ್ತದೆ.ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಈ ಹೊಸ ನಿಯಮ ಅನ್ವಯವಾಗದು ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: ವಂಡರ್ ಲಾ ಪಾರ್ಕ್ ನಲ್ಲಿ ಘೋರ ದುರಂತ! ಮೇಲಿನಿಂದ ಬಿದ್ದು ವ್ಯಕ್ತಿ ಸಾವು!!!
