Indo Pak Border: ಯಾವಾಗಲೂ ಸಂಘರ್ಷದಿಂದ ಕೂಡಿರುವ ಅಂತಾರಾಷ್ಟ್ರೀಯ ಗಡಿ ಆಗಿರುವ ಭಾರತ ಪಾಕಿಸ್ತಾನ (Indo Pak Border) ಗಡಿಯಲ್ಲಿ ವಾಸ ಮಾಡಲು ಗುಂಡಿಗೆ ಗಟ್ಟಿಯಾಗಿ ಇರಬೇಕು. ಆದ್ರೆ ಅದೇ ಗಡಿನಾಡು ಆಗಿರುವ ಪುಟ್ಟ ಗ್ರಾಮದಲ್ಲಿ ಜನರು ನಿರಾಳವಾಗಿ ಖುಷಿಯಿಂದ ಬದುಕುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ?
ಹೌದು ಅಂತಾರಾಷ್ಟ್ರೀಯ ಗಡಿಯಾದರೂ (International Border) ಇದನ್ನು ಗಡಿಯಾಗಿ ವಿಭಜಿಸಿಲ್ಲ, ಈ ಗಡಿಯಲ್ಲಿ ಬರುವ ಲಾಂಗ್ವಾ ಎಂಬ ಗ್ರಾಮವೊಂದು ಇತ್ತ ಭಾರತಕ್ಕೂ ಅತ್ತ ಬರ್ಮಾಕೂ ಸೇರುತ್ತದೆ. ಈ ಗ್ರಾಮದ ಜನರಿಗೆ ಎರಡು ದೇಶದ ಪೌರತ್ವವನ್ನು ನೀಡಲಾಗಿದೆ. ಈ ಗ್ರಾಮದ ಕೆಲವು ಮನೆಗಳು ಅರ್ಧ ಬರ್ಮಾಕ್ಕೆ ಅರ್ಧ ಭಾರತಕ್ಕೆ ಸೇರುತ್ತವೆ. ಅದರಲ್ಲೂ ಇಲ್ಲಿನ ಗ್ರಾಮದ ಮುಖ್ಯಸ್ಥರ ಮನೆಯ ನಡುವೆ ಗಡಿ ರೇಖೆ ಹಾದು ಹೋಗಿದ್ದು, ಇಲ್ಲಿ ನೀವು ಅಡುಗೆ ಮನೆಗೆ ಹೋದರೆ ಮಯನ್ಮಾರ್‌ಗೆ ಹೋದಂತೆ ಬೆಡ್‌ರೂಮ್‌ಗೆ ಬಂದರೆ ಭಾರತಕ್ಕೆ ಬಂದಂತೆ…!
ನಾಗಲ್ಯಾಂಡ್ ರಾಜ್ಯದಲ್ಲಿ ಬರುವ ಈ ಲಾಂಗ್ವಾ ಗ್ರಾಮ ವಿಶಾಲವಾದ ಸುಂದರವಾದ ಹಳ್ಳಿ. ಒಂದು ಕಡೆ ದಟ್ಟ ಕಾಡಿದ್ದರೆ ಮತ್ತೊಂದು ಕಡೆ ಸುಂದರವಾದ ಕೃಷಿ ಭೂಮಿ ಇದೆ. ಕೊನ್ಯಾಕ್ ನಾಗ (Konyak naga) ಆದಿವಾಸಿಗಳ ನೆಲ ಇದಾಗಿದ್ದು ಇವರು ಅದ್ಭುತ ಬೇಟೆಯಾಡುವ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ.
ನಾಗಲ್ಯಾಂಡ್‌ನ ಮೊನ್ (Mon) ಜಿಲ್ಲೆಯಲ್ಲಿ ಬರುವ ಈ ಲಾಂಗ್ವಾ ಗ್ರಾಮದಲ್ಲಿ ಒಟ್ಟು 4 ನದಿಗಳು ಹರಿಯುತ್ತಿದ್ದು, ಇದರಲ್ಲಿ ಎರಡು ನದಿಗಳು ಭಾರತಕ್ಕೆ ಹಾಗೂ ಮತ್ತೆರಡು ನದಿಗಳು ಬರ್ಮಾ ದೇಶಕ್ಕೆ ಸೇರುತ್ತವೆ. 1970ರಲ್ಲಿ ಇಲ್ಲಿ ಗಡಿರೇಖೆಯನ್ನು ಸ್ಥಾಪಿಸಲಾಯಿತು. ಗಡಿರೇಖೆಯನ್ನು ಎಳೆಯುವ ವೇಳೆ ಆಗಿನ ಅಧಿಕಾರಿಗಳು ಸಮುದಾಯವನ್ನು ಒಡೆಯಲು ಬಯಸಲಿಲ್ಲ, ಹೀಗಾಗಿ ಈ ಪುಟ್ಟ ಗ್ರಾಮ ಭಾರತ ಹಾಗೂ ಮಯನ್ಮಾರ್ ಎರಡೂ ದೇಶಕ್ಕೂ ಸೇರುತ್ತದೆ. ಹೀಗಾಗಿ ಇಲ್ಲಿ ಬರ್ಮಾ ಹಾಗೂ ಹಿಂದಿ ಎರಡೂ ಭಾಷೆಗಳಲ್ಲೂ ಗಡಿ ಕಲ್ಲಿನಲ್ಲಿರುವ ಬೋರ್ಡ್‌ನಲ್ಲಿ ಬರೆಯಲಾಗಿದೆ.
ಈ ಗ್ರಾಮದ ಮುಖ್ಯಸ್ಥನ ಮನೆಯ ಮಧ್ಯೆ ಈ ಗಡಿರೇಖೆಯೂ ಹಾದು ಹೋಗಿರುವುದರಿಂದ ಆತ ಭಾರತದಲ್ಲಿ ತಿಂದು ಮಯನ್ಮಾರ್‌ನಲ್ಲಿ ಮಲಗುತ್ತಾನೆ. ವಿಶೇಷ ಅಂದರೆ ಈ ಗ್ರಾಮದ ಜನರಿಗೆ ಭಾರತಕ್ಕೆ ಬರುವುದಕ್ಕಾಗಲಿ ಅಥವಾ ಬರ್ಮಾಕ್ಕೆ ಹೋಗುವುದಕ್ಕಾಗಲಿ ಯಾವುದೇ ಪಾಸ್‌ಪೋರ್ಟ್ ವೀಸಾದ ಅಗತ್ಯವಿಲ್ಲವಂತೆ.
ಇದನ್ನೂ ಓದಿ: Heart Attack: ನಿಮ್ಮ ಸಂಬಳವೂ ನಿಮಗೆ ಹೃದಯಾಘಾತ ತಂದೊಡ್ಡಬಹುದು ! ಭಯಾನಕ ವರದಿ ಬಹಿರಂಗ
