Home » Kerala: ಮಗುವಿಗೆ ಹೆಸರಿಡಲು ದಂಪತಿಗಳ ಜಗಳ – ಕೊನೆಗೆ ಹೈಕೋರ್ಟೇ ಮಾಡಿತು ನಾಮಕರಣ !! ಅರೆ.. ಇಟ್ಟ ಹೆಸರೇನು ಗೊತ್ತಾ ?!

Kerala: ಮಗುವಿಗೆ ಹೆಸರಿಡಲು ದಂಪತಿಗಳ ಜಗಳ – ಕೊನೆಗೆ ಹೈಕೋರ್ಟೇ ಮಾಡಿತು ನಾಮಕರಣ !! ಅರೆ.. ಇಟ್ಟ ಹೆಸರೇನು ಗೊತ್ತಾ ?!

2 comments
Kerala High court

Kerala High court : ತಿರುವನಂತಪುರಂ ಭೇರ್ಪಟ್ಟಿರುವ ದಂಪತಿಗಳಲ್ಲಿ ತಮ್ಮ ಮೂರು ವರ್ಷದ ಮಗುವಿಗೆ ನಾಮಕರಣ ಮಾಡುವ ಕುರಿತು ದಂಪತಿಗಳ ಮಧ್ಯೆ ಜಗಳ ಶುರುವಾಗಿದ್ದು, ಈ ಹಿನ್ನೆಲೆ ಕೇರಳ ಹೈಕೋರ್ಟ್‌(Kerala High court) ಆ ಮಗುವಿಗೆ ನಾಮಕರಣ ಮಾಡಿದೆ.

ಪೋಷಕರ ಜಗಳದಿಂದ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ನಮೂದಾಗಿರಲಿಲ್ಲ ಎನ್ನಲಾಗಿದೆ. ತನ್ನ ಮಗುವಿಗೆ ಹೆಸರಿಡಬೇಕು ಎಂದು ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ ನ ಈ ನಿರ್ಣಯ ಹೊರ ಬಿದ್ದಿದೆ. ಕೋರ್ಟ್ ಏನು ಹೇಳಿತು ಗೊತ್ತಾ??

ಮಗುವಿಗೆ ಪುಣ್ಯ ಎಂದು ಹೆಸರಿಡಬೇಕು ಎಂಬುದು ತಾಯಿಯ ಬಯಕೆಯಾದರೆ, ಪದ್ಮ ಎಂದು ಇಡಬೇಕು ಎಂಬುದು ತಂದೆಯ ಬಯಕೆಯಾಗಿದೆ. ಹೀಗಾಗಿ ಮಗುವಿಗೆ ತಾಯಿಯ ಆಯ್ಕೆಯ ಹೆಸರಾದ ‘ಪುಣ್ಯ ಎಂದು ಇಡಬೇಕು ಎಂದು ಕೋರ್ಟ್‌ ಆದೇಶಿಸಿದ್ದು ಆ ಹೆಸರಿಗೆ ತಂದೆಯ ಆಯ್ಕೆಯ ಹೆಸರನ್ನು ಉಪನಾಮವನ್ನಾಗಿ ಇಡಬೇಕು ಎಂದು ಸೂಚಿಸಿದೆ.

‘ಸದ್ಯ ಮಗುವು ತಾಯಿಯೊಂದಿಗೆ ವಾಸಿಸುತ್ತಿರುವುದರಿಂದ ತಾಯಿ ಸಲಹೆ ನೀಡಿರುವ ಹೆಸರಿಗೆ ಅಗತ್ಯ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಅಲ್ಲದೆ, ಪೋಷಕತ್ವದ ಕುರಿತು ಯಾವುದೇ ತಗಾದ ‘ಇಲ್ಲದೆ ಇರುವುದರಿಂದ ತಂದೆ ಸೂಚಿಸಿರುವ ಹೆಸರನ್ನೂ ಸೇರಿಸಬೇಕಿದೆ’ ಎಂದು ಕೋರ್ಟ್ ಘೋಷಿಸಿದೆ.

ಇದನ್ನೂ ಓದಿ: India – Canada : ಬೆಳ್ಳಂಬೆಳಗ್ಗೆಯೇ ಕೆನಡಾಗೆ ಬಿಗ್ ಶಾಕ್ ಕೊಟ್ಟ ಭಾರತ – ಕೊನೆಗೂ ಆ ನಿರ್ಧಾರ ಮಾಡೇ ಬಿಟ್ರಾ ಮೋದಿ ?!

You may also like

Leave a Comment