Home » Love Relationship: ಪ್ರೇಮ ಸಂಬಂಧದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ‘ರೇಪ್‌ʼ ಎಂದು ಆಗಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು!!!

Love Relationship: ಪ್ರೇಮ ಸಂಬಂಧದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ‘ರೇಪ್‌ʼ ಎಂದು ಆಗಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು!!!

by Mallika
1 comment
Love Relationship

Love Relationship: ಪಾಟ್ನಾ ಪ್ರೇಮ ಸಂಬಂಧದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ ವರ್ಗಕ್ಕೆ ಸೇರುವುದಿಲ್ಲ ಎಂದು ಪಾಟ್ನಾ ಸಿವಿಲ್ ಕೋರ್ಟ್ ಗುರುವಾರ ಹೇಳಿದೆ. ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಪಾಟ್ನಾ ಸಿವಿಲ್ ಕೋರ್ಟ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಪ್ರಥಮ) ಸಂಗಮ್ ಸಿಂಗ್ ಈ ವಿಷಯ ತಿಳಿಸಿದ್ದಾರೆ.

ಸಂತ್ರಸ್ತೆ ವಯಸ್ಕಳಾಗಿದ್ದು, ಆರೋಪಿ ವಿಪಿನ್ ಕುಮಾರ್ ಅಲಿಯಾಸ್ ವಿಪಿನ್ ಲಾಲ್ ಜೊತೆ ಪ್ರೇಮ ಸಂಬಂಧ(Love Relationship) ಹೊಂದಿದ್ದು, ಇಬ್ಬರ ಸಮ್ಮತಿಯಿಂದ ದೈಹಿಕ ಸಂಬಂಧ ಬೆಳೆಸಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಸಿಂಗ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆ 2015ರಲ್ಲಿ ಪಾಟ್ನಾ ಜಿಲ್ಲೆಯ ಅಥ್ಮಲ್ ಗೋಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಜಿಲ್ಲಾ ಪೊಲೀಸರು ವಿಪಿನ್ ಕುಮಾರ್ ವಿರುದ್ಧ ಪಾಟ್ನಾ ಸಿವಿಲ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯ ವೇಳೆ, ದೂರುದಾರರಿಗೆ ಆರೋಪಿಯೊಂದಿಗೆ ಹಣಕಾಸಿನ ವಿವಾದವಿದ್ದು, ಅನಂತರ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಾರೆ. ಆದರೆ, ಆಕೆ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ಹಾಜರುಪಡಿಸಲು ವಿಫಲಳಾಗಿದ್ದಾಳೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅತ್ಯಾಚಾರ ಆರೋಪಗಳಿಂದ ಆರೋಪಿಗಳನ್ನು ಕೋರ್ಟ್‌ ಖುಲಾಸೆ ಮಾಡಿದೆ.

ಇದನ್ನೂ ಓದಿ: ವೈರಲ್ ಆಗ್ತಿದೆ ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದ ಮಂಗಳೂರು ವ್ಯಕ್ತಿ ಹೇಳಿಕೆಯ ವೀಡಿಯೋ

You may also like

Leave a Comment