Home » POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದಲ್ಲಿ ವಿಲೀನ !! ಕೇಂದ್ರದಿಂದ ಬಂತು ಸ್ಪೋಟಕ ಸುದ್ದಿ?

POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದಲ್ಲಿ ವಿಲೀನ !! ಕೇಂದ್ರದಿಂದ ಬಂತು ಸ್ಪೋಟಕ ಸುದ್ದಿ?

1 comment
POK

POK: ಪಾಕ್ (POK)ಆಕ್ರಮಿತ ಪ್ರದೇಶವು ಭಾರತಕ್ಕೆ ಸೇರಬೇಕೆಂಬ ಭಾರತೀಯರ ಹಲವು ವರ್ಷಗಳ ಕನಸು ಇದೀಗ ನೆರವೇರುವ ಕಾಲ ಹತ್ತಿರವಾಗಿದೆ. ಈ ಕುರಿತು ಕೇಂದ್ರ ಸಚಿವ ಹಾಗೂ ನಿವೃತ್ತ ಜನರಲ್ ವಿ.ಕೆ ಸಿಂಗ್‌ ಸಂತೋಷದ ಸುದ್ಧಿಯೊಂದನ್ನು ನೀಡಿದ್ದಾರೆ.

POK

ಹೌದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸ್ವಲ್ಪ ಸಮಯದ ನಂತರ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ (ನಿವೃತ್ತ) ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಭಾರತೀಯರ ಮತ್ತೊಂದು ಆಸೆ ನೆರವೇರುವ ಕಾಲ ಹತ್ತಿರವಾಗಿದೆ. ಅಲ್ಲದೆ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ತನ್ನ ಕಾರ್ಯ ಸಾಧಿಸಲು ಹೊರಟಿದೆ ಎಂಬುದನ್ನು ಸ್ವತಃ ಕೇಂದ್ರ ಸಚಿವರೇ ಹೇಳಿದ್ದಾರೆ.

ಅಂದಹಾಗೆ ರಾಜಸ್ಥಾನದ ದೌಸಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ, ನಿವೃತ್ತ ಜನರಲ್ ವಿ.ಕೆ ಸಿಂಗ್‌ ಅವರಿಗೆ ಭಾರತಕ್ಕೆ ರಸ್ತೆಗಳನ್ನು ತೆರೆಯಲು ಪಿಒಕೆಯ ಶಿಯಾ ಮುಸ್ಲಿಮರ ಬೇಡಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸ್ವಲ್ಪ ಸಮಯ ಕಾಯಿರಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸ್ವಯಂಚಾಲಿತವಾಗಿ ಭಾರತದೊಂದಿಗೆ ವಿಲೀನಗೊಳ್ಳುತ್ತದೆ’ ಎಂದು ಹೇಳಿದರು.

ಇನ್ನು ಕಳೆದ ವರ್ಷ, ಜೈಶಂಕರ್ ಪಿಒಕೆ ಭಾರತದ ಒಂದು ಅವಿಭಾಗ್ಯ ಅಂಗವಾಗಿದೆ. ದೇಶವು ಮುಂದೊಂದು ದಿನ ಭೌತಿಕ ನ್ಯಾಯವ್ಯಾಪ್ತಿಯನ್ನು ಹೊಂದಲಿದ್ದು, ಪಿಒಕೆ ಬಗ್ಗೆ ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದ್ದರು. ಇದೀಗ ಮತ್ತೆ ಕೇಂದ್ರ ಸಚಿವರೇ ಈ ಕುರಿತು ಮಹತ್ವದ ಹೇಳಿಕೆ ನೀಡಿರುವುದರಿಂದ ಈ ಕುರಿತ ಕುತೂಹಲ ಇನ್ನೂ ಹೆಚ್ಚಾಗಿದೆ.

Chaitra Kundapura Arrested: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ; ಕಾಂಗ್ರೆಸ್‌ ಮಾಧ್ಯಮ ವಕ್ತಾರೆಗೆ ಸಿಸಿಬಿ ನೋಟಿಸ್‌!!

ಇದನ್ನೂ ಓದಿ: BJP: ಕೇಂದ್ರಸಚಿವರನ್ನೇ ಕೂಡಿಹಾಕಿದ ಬಿಜೆಪಿ ಕಾರ್ಯಕರ್ತರು !! ಕಾರಣ ಕೇಳಿದ್ರೆ ಶಾಕ್

You may also like

Leave a Comment