Property: ತಂದೆಯ ಆಸ್ತಿಯಲ್ಲಿ (property) ಗಂಡು (boy) ಮತ್ತು ಹೆಣ್ಣು (girl) ಇಬ್ಬರೂ ಸಮಾನ ಪಾಲು ಹೊಂದಿರುತ್ತಾರೆ ಎಂದು ಕಾನೂನು ಹೇಳುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಗಳಿಗೂ ಹಕ್ಕು ಇದೆ ಎಂದು ಹೆಚ್ಚಿನವರಿಗೆ ತಿಳಿದಿದೆ. ಆದರೆ, ಮನೆ ಮಗಳಿಗೆ ತಂದೆ ಆಸ್ತಿಯಲ್ಲಿ ಪಾಲು ಸಿಗುತ್ತಾ?! ಯಾವೆಲ್ಲ ಸಂದರ್ಭಗಳಲ್ಲಿ ತಂದೆಯ ಆಸ್ತಿಯನ್ನು (Father’s Property) ಹೆಣ್ಣು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಎಂಬುದರ ಮಾಹಿತಿ ಇಲ್ಲಿದೆ.
1956ರಲ್ಲಿ ನಿರ್ಮಾಣ ಮಾಡಿರುವಂತಹ ಈ ರೀತಿಯ ಆಸ್ತಿ ಪಾಲುಗಾರಿಕೆಯ ನಿಯಮದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಆಸ್ತಿ (Property) ಯಲ್ಲಿ ಸಮಾನವಾದ ಭಾಗವನ್ನು ನೀಡಬೇಕು ಎಂಬ ತೀರ್ಪನ್ನು ನೀಡಲಾಗಿತ್ತು. ಆದರೆ, ತಂದೆಯ ಸ್ವಂತ ಅರ್ಜಿತವಾಗಿರುವ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲು ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ ಎಂದು ಹೇಳಬಹುದಾಗಿದೆ.
ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ (Freehold property) ಎನ್ನುತ್ತಾರೆ. ಸ್ವಯಾರ್ಜಿತ ಆಸ್ತಿಯಲ್ಲಿ ಮಗ, ಮಗಳು ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ. ಯಾಕಂದ್ರೆ ಇದು ತಂದೆ ಖರೀದಿಸಿದ ಅಥವಾ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿದೆ. ಇದನ್ನು ತಂದೆ ಯಾರಿಗೆ ಬೇಕಾದರೂ ಕೊಡಬಹುದು.
ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಕ್ಕಳು ಸಮಾನವಾದ ಅಧಿಕಾರವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ತಂದೆ ತನ್ನ ಸ್ವಂತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕನ್ನು ನೀಡಲು ಒಪ್ಪಿಕೊಳ್ಳದೆ ಇದ್ದಲ್ಲಿ ಹೆಣ್ಣು ಮಕ್ಕಳು ಏನು ಕೂಡ ಮಾಡಲು ಸಾಧ್ಯವಿಲ್ಲ.
2005ರಲ್ಲಿ ಕೊನೆಯ ತೀರ್ಪನ್ನು ನೀಡಿರುವ ಸಂದರ್ಭದಲ್ಲಿ ಸ್ಪಷ್ಟವಾಗಿ ಇದರ ಬಗ್ಗೆ ತೀರ್ಪನ್ನು ನೀಡಿದ್ದು, ಮದುವೆ ಆಗಿರುವ ಕಾರಣಕ್ಕಾಗಿ ಮನೆಯ ಹೆಣ್ಣು ಮಗಳಿಗೆ ಆಸ್ತಿಯಲ್ಲಿ ಸಮಾನವಾದ ಅಧಿಕಾರವನ್ನು ಪಡೆಯುವುದರಿಂದ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗಿದೆ. ಒಂದು ವೇಳೆ ಇದರ ವಿರುದ್ಧವಾಗಿ ಆಕೆಗೆ ಅಧಿಕಾರವನ್ನು ನೀಡದೆ ಹೋದಲ್ಲಿ ಆಕೆ ನ್ಯಾಯಾಲಯಕ್ಕೆ ಹೋಗಿ ತನ್ನ ಅಧಿಕಾರವನ್ನು ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: BIGG NEWS: ಬೆಳ್ಳಂಬೆಳಗ್ಗೆಯೇ ವಾಹನ ಮಾಲಿಕರಿಗೆ ಬೊಂಬಾಟ್ ಸುದ್ದಿ – ಸಿದ್ದು ಗೌರ್ಮೆಂಟ್ ನಿಂದ ಬಂತು ಮಹತ್ವದ ಆದೇಶ
