Home » Vikram lander : ಚಂದ್ರನಂಗಳದಲ್ಲಿ ಇಸ್ರೋದಿಂದ ಮತ್ತೊಂದು ಅಚ್ಚರಿಯ ಸಾಧನೆ – ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದ ವಿಕ್ರಮ್ ಲ್ಯಾಂಡರ್- ವೈರಲ್ ಆಯ್ತು ವಿಡಿಯೋ

Vikram lander : ಚಂದ್ರನಂಗಳದಲ್ಲಿ ಇಸ್ರೋದಿಂದ ಮತ್ತೊಂದು ಅಚ್ಚರಿಯ ಸಾಧನೆ – ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದ ವಿಕ್ರಮ್ ಲ್ಯಾಂಡರ್- ವೈರಲ್ ಆಯ್ತು ವಿಡಿಯೋ

3 comments

Vikram lander: ಚಂದ್ರನ (Moon) ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ 10 ದಿನಗಳ ನಂತರ, ಚಂದ್ರಯಾನ -3 (Chandrayaan-3) ಲ್ಯಾಂಡರ್ (Vikram Lander) ಕೆಲವು ಸೆಕೆಂಡುಗಳ ಕಾಲ ಚಂದ್ರನ ಮೇಲ್ಮೈಯಲ್ಲಿ ಪ್ರಾಯೋಗಿಕವಾಗಿ ಸ್ವಲ್ಪ ಎತ್ತರಕ್ಕೆ ಹಾರಾಟ ನಡೆಸಿ ಮತ್ತೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ.

ಹೌದು, ಚಂದ್ರಯಾನ -3 ಮಿಷನ್‌ ಮತ್ತೊಂದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಚಂದ್ರನ ಅಂಗಳದಲ್ಲಿರುವ ವಿಕ್ರಮ್‌ ಲ್ಯಾಂಡರ್‌ ತನ್ನ ಲ್ಯಾಂಡಿಂಗ್‌ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿದಿದೆ ಎಂದು ಇಸ್ರೋ ಸಂತಸದ ಸುದ್ಧಿಯನ್ನು ಬಹಿರಂಗಪಡಿಸಿದ್ದು, ಭಾರತದ ಐತಿಹಾಸಿಕ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಮತ್ತೊಂದು ಐತಿಹಾಸಿಕ ಸಾಫ್ಟ್‌ ಲ್ಯಾಂಡ್‌ ಮಾಡಿದೆ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಇಸ್ರೋ, ತನ್ನ ಯೋಜನೆಯ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಭಾನುವಾರ ನಡೆದ ಚಂದ್ರಯಾನ-3 ಲ್ಯಾಂಡರ್ ಹೋಪ್ (ಭರವಸೆ) ಪ್ರಯೋಗ ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಎಂಜಿನ್‌ಗಳನ್ನು ಹಾರಿಸಿತು. ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಇಸ್ರೋ ಮಾಹಿತಿ ನೀಡಿದೆ.

ಏನಿದು ಹೊಸ ವಿಷಯ?
ಚಂದ್ರನಲ್ಲಿ ಕತ್ತಲು ಆವರಿಸುತ್ತಿರುವ ಹಿನ್ನೆಲೆ ವಿಕ್ರಮ್‌ ಲ್ಯಾಂಡರನ್ನು ಇಸ್ರೋ ಸ್ಲೀಪ್‌ ಮೋಡ್‌ಗೆ ಹಾಕಿತ್ತು. ಬಳಿಕ ವಿಜ್ಞಾನಿಗಳು ವಿಕ್ರಮ್‌ನ ಕಿಕ್-ಸ್ಟಾರ್ಟ್ ಮಾಡಿದ್ದಾರೆ. ಎಂಜಿನ್‌ಗಳ ಸಹಾಯದಿಂದ 40 ಸೆಂ.ಮೀ ಎತ್ತರಕ್ಕೆ ಹಾರಿಸಿ 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಗಿದೆ. ಕಿಕ್ ಸ್ಟಾರ್ಟ್‌ನಿಂದ ಭವಿಷ್ಯದಲ್ಲಿ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ. ಚಂದ್ರನಲ್ಲಿ ಮತ್ತೊಮ್ಮೆ ಬೆಳಕಿನ ನಂತರ ಕಾರ್ಯಾಚರಣೆ ಮಾಡಲು ಪೂರ್ವ ತಯಾರಿ ಮಾಡಲಾಗಿದೆ. ವಿಕ್ರಮ್ ಲ್ಯಾಂಡರ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಶಿವಶಕ್ತಿ ಪಾಯಿಂಟ್‌ನಲ್ಲಿ ಲ್ಯಾಂಡ್‌ ಆಗಿದ್ದ ವಿಕ್ರಮ್ ಲ್ಯಾಂಡರ್‌ನ ಇಂಜಿನ್‌ಗಳನ್ನು ಮತ್ತೊಮ್ಮೆ ಸ್ಟಾರ್ಟ್‌ ಮಾಡಿ, ಸ್ವಲ್ಪ ಮೇಲಕ್ಕೆ ಏರಿಸಿ, ಕೊಂಚ ಬದಿಗೆ ಸರಿಸಿ ಲ್ಯಾಂಡ್‌ ಮಾಡುವ ಉದ್ದೇಶ ಇಸ್ರೋದ ಈ ಯೋಜನೆಗೆ ಇದ್ದಿರಲಿಲ್ಲ. ಆದರೆ. ಚಂದ್ರನಲ್ಲಿ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ನ ಎಲ್ಲಾ ಕೆಲಸಗಳು ಸಂಪೂರ್ಣವಾಗಿ ಪೂರ್ಣಗೊಂಡಿವೆ. ಪ್ರಗ್ಯಾನ್‌ ಹಾಗೂ ವಿಕ್ರಮ್‌ ಇನ್ನು ನಿದ್ರಾವಸ್ಥೆಗೆ ಹೋಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಕೂಡ ಹೇಳಿದ್ದರು. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸುವ ಮುನ್ನ ಒಂದು ಕೊನೆಯ ಹಂತದ ಪ್ರಯತ್ನವಾಗಿ ಇಸ್ರೋ ಈ ಐತಿಹಾಸಿಕ ಕಾರ್ಯಾಚರಣೆಯನ್ನು ಮಾಡಿದ್ದು, ಅದರಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.

You may also like

Leave a Comment