Hsrp Number Plates : ವಾಹನಗಳಿಗೆ (Vehicle) ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಕೆಯ ಬಗ್ಗೆ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೊಸ ರೂಲ್ಸ್ ಜಾರಿಯಾಗಲಿದೆ. 2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ಆದೇಶಿಸಿದೆ. ಇದನ್ನು ನವೆಂಬರ್ 17ರೊಳಗೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಬೀಳುವುದು ಖಚಿತ!!.
ಕೇಂದ್ರ ಸರ್ಕಾರದ (Central government) ಮಾರ್ಗಸೂಚಿಯಂತೆ 2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯು, ನವೆಂಬರ್ 17ರೊಳಗೆ ವಾಹನಗಳು ಎಚ್‌ಎಸ್‌ಆರ್‌ಪಿ (Hsrp Number Plates) ಅಳವಡಿಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ವಾಹನಗಳಿಗೆ 500ರಿಂದ 1 ಸಾವಿರ ರು. ದಂಡ ವಿಧಿಸುವುದಾಗಿಯೂ ಹೇಳಲಾಗಿದೆ.
HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ ಆಗಿದೆ. ಏಕರೂಪದ ನಂಬರ್ ಪ್ಲೇಟ್ ಇದಾಗಿರುವುದರಿಂದ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ. ಏಪ್ರಿಲ್ 01 , 2019ಕ್ಕೂ ಮುನ್ನ ಸುಮಾರು ಎರಡು ಕೋಟಿಗಳಷ್ಟು ವಾಹನಗಳು ನೋಂದಣಿಯಾಗಿವೆ. ವಾಹನ ತಯಾರಕರು ಈಗಾಗಲೇ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಳೆ ವಾಹನ ಮಾಲಿಕರು ಅಧಿಕೃತ ಡೀಲರ್ ಗಳೊಂದಿಗೆ ಈ ನಂಬರ್ ಪ್ಲೇಟ್ ಗಳನ್ನು ಆರ್ಡರ್ ಮಾಡಬಹುದಾಗಿದೆ.
