Home » High Court: ಹೆಂಡತಿಯರೇ ನಿಮಗಿನ್ನು ಅಡುಗೆ ಬರಲಿಲ್ಲವೆಂದ್ರೆ ಡೋಂಟ್ ವರಿ – ಮಹತ್ವದ ತೀರ್ಪು ನೀಡಿದೆ ನೋಡಿ ಹೈಕೋರ್ಟ್!

High Court: ಹೆಂಡತಿಯರೇ ನಿಮಗಿನ್ನು ಅಡುಗೆ ಬರಲಿಲ್ಲವೆಂದ್ರೆ ಡೋಂಟ್ ವರಿ – ಮಹತ್ವದ ತೀರ್ಪು ನೀಡಿದೆ ನೋಡಿ ಹೈಕೋರ್ಟ್!

0 comments
Kerala High Court

Kerala High Court: 2012ರ ಮೇ ಯಲ್ಲಿ ಅಬುಧಾಬಿಯಲ್ಲಿ ವೈವಾಹಿಕ (Marraige)ಜೀವನಕ್ಕೆ ಕಾಲಿಟ್ಟ ಜೋಡಿಯ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಮೂಡಿ ಪ್ರಕರಣ ಕೇರಳ ಹೈಕೋರ್ಟ್(Kerala High Court)ವರೆಗೆ ಬಂದು ನಿಂತಿದೆ. ಅಡುಗೆ ಮಾಡಲು ಗೊತ್ತಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ರದ್ದು (Marraige Cancellation)ಮಾಡಬೇಕೆಂದು ಪತಿ(Husband)ಕೋರ್ಟ್ ಮೊರೆ ಹೋಗಿದ್ದು, ಆದರೆ ಪತ್ನಿಗೆ(Wife)ಆಹಾರವನ್ನು ತಯಾರಿಸಲು ಬಾರದೇ ಇರುವುದನ್ನು ದಾಂಪತ್ಯದಲ್ಲಿ ಕ್ರೌರ್ಯ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲವೆಂದು ಈ ಕಾರಣಕ್ಕಾಗಿ ಮದುವೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಅದರಲ್ಲಿ ಆತ ವಿಚ್ಛೇದನಕ್ಕಾಗಿ ನೀಡಿರುವ ಕಾರಣವನ್ನೂ ಗಮನಿಸಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕೋರ್ಟಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿ, ತನ್ನ ಪತ್ನಿಗೆ ಅಡುಗೆ ತಿಳಿದಿಲ್ಲ. ಹೀಗಾಗಿ ಮದುವೆಯನ್ನು ರದ್ದು ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಆದರೆ, ಅವಳು ಅವನಿಗೆ ಆಹಾರವನ್ನು ತಯಾರಿಸಲಿಲ್ಲ ಎಂಬುದನ್ನು ಕಾನೂನುಬದ್ಧವಾಗಿ ಕ್ರೌರ್ಯ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ಈ ಕಾರಣಕ್ಕೆ ಮದುವೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. ಕಕ್ಷಿದಾರರು ಹತ್ತು ವರ್ಷಗಳಿಂದ ಪತಿ-ಪತ್ನಿ ಬೇರೆ ಬೇರೆ ಜೀವಿಸುತ್ತಿರುವ ಹಿನ್ನೆಲೆ ಈ ವಿವಾಹದಲ್ಲಿ ‘ಪ್ರಾಯೋಗಿಕವಾಗಿ ಭಾವನಾತ್ಮಕ ಅಂಶಗಳು ಕಮ್ಮಿಯಾಗಿದೆ ಜೊತೆಗೆ ಭಾವನೆಗಳು ಸತ್ತಿವೆ’ ಎಂದು ನ್ಯಾಯಾಲಯ ಹೇಳಿದೆ.

ಸಂಬಂಧಿಕರ ಸಮ್ಮುಖದಲ್ಲಿ ಪತ್ನಿ ತನಗೆ ಅವಮಾನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಪತಿ ವಾದ ಮಾಡಿದ್ದು, ಆಕೆ ನನಗೆ ಗೌರವ ನೀಡುವುದಿಲ್ಲ. ಆಕೆಗೆ ಅಡುಗೆ ಮಾಡಲು ಬರುವುದಿಲ್ಲ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಾಳೆ. ನನ್ನನ್ನು ಉದ್ಯೋಗದಿಂದ ವಜಾ ಮಾಡಬೇಕೆಂಬ ಉದ್ದೇಶದಿಂದ ಪತ್ನಿ, ನನ್ನ ವಿರುದ್ಧವೇ ಅವಹೇಳನಕಾರಿ ಹೇಳಿಕೆಯನ್ನು ನೀಡಿ ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಗೆ ದೂರು ನೀಡಿದ್ದಾಳೆ ಎಂದು ಪತಿ ಕೋರ್ಟ್ ಮುಂದೆ ವಾದ ಮಂಡಿಸಿದ್ದಾನೆ.

ಈ ನಡುವೆ ಪತ್ನಿಯು ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ತನ್ನ ಪತಿ ಲೈಂಗಿಕ ವಿಕೃತಿಗಳನ್ನು ಹೊಂದಿದ್ದು, ಬಾಡಿ ಶೇಮಿಂಗ್‌ ಮಾಡುತ್ತಿದ್ದರು ಎಂದು ಆರೋಪಿಸಿದ್ದು, ತನ್ನ ಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದು, ಆತನಿಗೆ ಬರೆದಿದ್ದ ಔಷಧಗಳನ್ನು ಸೇವಿಸುವುದನ್ನು ನಿಲ್ಲಿಸಿರುವ ಹಿನ್ನೆಲೆ ತನ್ನ ಪತಿಯ ಆರೋಗ್ಯ ಸಮಸ್ಯೆ ಸರಿ ಮಾಡುವ ಸಲುವಾಗಿ ಉದ್ಯೋಗದಾತರ ಸಹಾಯವನ್ನು ಕೋರಿದ್ದಾಗಿ ಪತ್ನಿ ತಿಳಿಸಿದ್ದಾಳೆ.ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಮದುವೆಯನ್ನು ರದ್ದು ಮಾಡಲು ಆಗದು ಎಂದು ಹೇಳಿ, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: LPG Gas Cylinder: ಇವರಿಗೆ ಖಾಲಿ 500 ರೂ. ಗೆ ಸಿಗ್ತಿದೆ LPG ಸಿಲಿಂಡರ್ – ಪಡೆಯಲು ಮುಗಿ ಬಿದ್ದ ಜನ

You may also like

Leave a Comment