Home » Netravati River: ಭಾರೀ ಮಳೆ ಹಿನ್ನೆಲೆ : ಮತ್ತೆ ಜೀವಂತಿಕೆ ಪಡೆದ ನೇತ್ರಾವತಿ

Netravati River: ಭಾರೀ ಮಳೆ ಹಿನ್ನೆಲೆ : ಮತ್ತೆ ಜೀವಂತಿಕೆ ಪಡೆದ ನೇತ್ರಾವತಿ

by Mallika
0 comments

Netravati River: ಉಪ್ಪಿನಂಗಡಿ: ಬಿಸಿಲಿನ ಝಳ ಹಾಗೂ ಮಳೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಹರಿವು ನಿಲ್ಲಿಸಿದ್ದ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮತ್ತೆ ನೀರಿನ ಹರಿವು ಆರಂಭಗೊಂಡಿದೆ.

ಎರಡು ದಿನಗಳಲ್ಲಿ ಅಲ್ಲಲ್ಲಿ  ಮಳೆ ಸುರಿದಿದೆ.ಮಳೆಯ ಪರಿಣಾಮ ಗುರುವಾರ ಮುಂಜಾನೆಯಿಂದಲೇ ನೀರಿನ ಹರಿವು ಪ್ರಾರಂಭಗೊಂಡಿದ್ದು, ನೇತ್ರಾವತಿ ಮತ್ತೆ ಜೀವಂತಿಕೆ ಪಡೆದಂತಾಗಿದೆ.

ಎಪ್ರಿಲ್‌ 6ನೇ ತಾರೀಕಿನಿಂದ ಹರಿವು ಸ್ಥಗಿತಗೊಂಡು ಬಳಿಕ ಸಂಪೂರ್ಣ ಬರಡಾದ ನೇತ್ರಾವತಿ ಬಯಲಿನಂತಾಗಿತ್ತು. ಜಲಚರಗಳು ಜೀವಕಳೆದುಕೊಂಡು ಪಕ್ಷಿಗಳಿಗೆ ಆಹಾರವಾಗುತ್ತಿದ್ದ ದೃಶ್ಯ ಮನ ಕರಗುವಂತಿತ್ತು.

ಗುರುವಾರ ರಾತ್ರಿ ಭಾರೀ ಗಾಳಿಯೊಂದಿಗೆ ಸಿಡಿಲಬ್ಬರದ ಮಳೆ ಸುರಿದ ಪರಿಣಾಮ ನೀರಿನ ಹರಿವು ಹೆಚ್ಚಳವಾಗಿದೆ.

ಇದನ್ನೂ ಓದಿ:ಗಮನಿಸಿ ಎಣ್ಣೆ ಪ್ರಿಯರೇ, ಚುನಾವಣಾ ಮತ ಎಣಿಕೆ ಪ್ರಯುಕ್ತ ಮದ್ಯದಂಗಡಿ ಬಂದ್!!!

You may also like

Leave a Comment