Home » ನೂತನ ಎ.ಸಿ ಖರೀದಿಸಿದ ಕುಟುಂಬದಲ್ಲಿ ನಡೆದೇಹೋಯಿತು ದುರಂತ!! ಇಬ್ಬರ ದುರ್ಮರಣ-ಇಬ್ಬರು ಗಂಭೀರ

ನೂತನ ಎ.ಸಿ ಖರೀದಿಸಿದ ಕುಟುಂಬದಲ್ಲಿ ನಡೆದೇಹೋಯಿತು ದುರಂತ!! ಇಬ್ಬರ ದುರ್ಮರಣ-ಇಬ್ಬರು ಗಂಭೀರ

0 comments

ರಾತ್ರಿ ಉಂಡು ಮಲಗಿದ್ದ ವೇಳೆ ಚಾಲು ಮಾಡಿದ್ದ ಎಸಿ ಏಕಾಏಕಿ ಸ್ಫೋಟಗೊಂಡು ತಾಯಿ ಮಗಳು ಮೃತಪಟ್ಟ ಘಟನೆಯೊಂದು ಮುಂಬೈ ನಗರದ ಮನೆಯೊಂದರಲ್ಲಿ ನಡೆದಿದೆ.

ಮೃತರನ್ನು ಲಕ್ಷ್ಮಿ ರಾಥೋಡ್ ಹಾಗೂ ಅವರ ಪುತ್ರಿ ಮಧು ರಾಥೋಡ್ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಇದ್ದ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಲಕ್ಷೀ ರಾಥೋಡ್ ಇತ್ತೀಚೆಗೆ ಹೊಸ ಎಸಿ ಖರೀದಿಸಿದ್ದು, ಎಂದಿನಂತೆ ಆ ದಿನವೂ ಮನೆಮಂದಿ ಎಸಿ ಚಾಲು ಮಾಡಿ ಮಲಗಿದ್ದರು ಎನ್ನಲಾಗಿದೆ.

ಈ ವೇಳೆ ಎಸಿ ಸ್ಫೋಟಗೊಂಡಿದ್ದು, ಪರಿಣಾಮ ಮನೆಯೆಲ್ಲಾ ಬೆಂಕಿ ಆವರಿಸಿದ್ದು ಇಬ್ಬರು ಸಜೀವ ದಹನವಾಗಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಉಳಿದಿಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.

You may also like

Leave a Comment