Home » Driving License : ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಂದಿದೆ ಹೊಸ ಕ್ರಮ ! ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ !

Driving License : ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಂದಿದೆ ಹೊಸ ಕ್ರಮ ! ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ !

0 comments

ಇದೀಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ಕ್ರಮ ಬಂದಿದ್ದು, ಈ ನಿಯಮದ ಪ್ರಕಾರ, ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ಕಾರ್ಡ್ ಮಾಡಲಾಗುವ ಜಿಲ್ಲೆಯಲ್ಲಿ ಮಾತ್ರ ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಕಲಿಕಾ ಚಾಲನಾ ಪರವಾನಗಿಯನ್ನು ಜಿಲ್ಲೆಯಲ್ಲಿ ಮಾಡಿಕೊಡಲಾಗುವುದು. ಅರ್ಜಿದಾರರಿಗೆ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ವ್ಯವಸ್ಥೆ ಇದ್ದು, ಶಾಶ್ವತ ಚಾಲನಾ ಪರವಾನಗಿಗಾಗಿ ಅರ್ಜಿದಾರರು ಬಯೋಮೆಟ್ರಿಕ್ ಪರೀಕ್ಷೆಯನ್ನು ನೀಡುವುದನ್ನು ಸರ್ಕಾರ ಕಡ್ಡಯಗೊಳಿಸಿದೆ.

ಚಾಲನಾ ಪರವಾನಗಿಯ ನಿಯಮ ಬದಲಾಗಲು ಕಾರಣವೇನೆಂದರೆ, ಡ್ರೈವಿಂಗ್ ಲೈಸೆನ್ಸ್ ಗೆ ಮುಖರಹಿತ ಅಂದ್ರೆ ಆನ್ ಲೈನ್ ಪರೀಕ್ಷೆ ಇರುವ ಕಾರಣ ಸರ್ಕಾರ ಈ ಹೊಸ ನಿಯಮ ಮಾಡಿದೆ. ಹಸ್ತಚಾಲಿತ ಪರೀಕ್ಷೆಯಲ್ಲಿ ಅರ್ಜಿದಾರರು ಯಾವುದೇ ಜಿಲ್ಲೆಯಿಂದ ಮಾಡಿದ ಕಲಿಕೆಯ ಡಿಎಲ್ ಅನ್ನು ಪಡೆಯಬಹುದು. ಆದರೆ ಆನ್ ಲೈನ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ವಿಳಾಸವನ್ನು, ಮಾಹಿತಿಗಳನ್ನು ಆಧಾರ್ ಕಾರ್ಡ್‌ನಿಂದಲೇ ಪರಿಶೀಲಿಸಲಾಗುತ್ತದೆ ಎಂದು ಲಕ್ನೋ ವಿಭಾಗದ ಸಹಾಯಕ ಸಾರಿಗೆ ಅಧಿಕಾರಿ ಅಖಿಲೇಶ್ ಕುಮಾರ್ ದ್ವಿವೇದಿ ಅವರು ಹೇಳಿದ್ದಾರೆ. ಹಾಗಾಗಿ ಅರ್ಜಿದಾರರು ತಮ್ಮ ಕಲಿಕಾ ಚಾಲನಾ ಪರವಾನಗಿಯನ್ನು ಆಧಾರ್ ಕಾರ್ಡ್ ಮಾಡಿದ ಜಿಲ್ಲೆಯಿಂದ ಪಡೆಯಬೇಕಾಗಿದೆ.

ಈ ಹಿಂದೆ ಅರ್ಜಿದಾರರ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿದ್ದ ವಿಳಾಸವನ್ನು ತಾತ್ಕಾಲಿಕವೆಂದು ಪರಿಗಣಿಸಿ, ಕಲಿಕೆಯ ಡಿಎಲ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತಿತ್ತು. ಆದರೆ ಹೊಸ ನಿಯಮದಲ್ಲಿ, ಆನ್‌ಲೈನ್ ಪರೀಕ್ಷೆಯಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ, ಈ ಮೂಲಕ ಮಾತ್ರವೇ ದೃಢೀಕರಣವನ್ನು ಮಾಡಬಹುದು ಎಂದು ಸಹಾಯಕ ಸಾರಿಗೆ ಅಧಿಕಾರಿ ಅಖಿಲೇಶ್ ಕುಮಾರ್ ದ್ವಿವೇದಿ ಹೇಳಿದ್ದಾರೆ. ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಬೇಕೆಂದಾದರೆ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

You may also like

Leave a Comment