Home » ಆಟೋ ಚಾಲಕರೇ ನಿಮಗಿದೋ ಮುಖ್ಯ ಮಾಹಿತಿ| ನೀವು ಈ ನಿಯಮ ಪಾಲಿಸದೇ ಹೋದರೆ ದಂಡ ಖಚಿತ – ಸಂಚಾರ ಪೊಲೀಸರಿಂದ ಖಡಕ್ ಆದೇಶ

ಆಟೋ ಚಾಲಕರೇ ನಿಮಗಿದೋ ಮುಖ್ಯ ಮಾಹಿತಿ| ನೀವು ಈ ನಿಯಮ ಪಾಲಿಸದೇ ಹೋದರೆ ದಂಡ ಖಚಿತ – ಸಂಚಾರ ಪೊಲೀಸರಿಂದ ಖಡಕ್ ಆದೇಶ

by Mallika
0 comments

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಆಟೋ ಚಾಲಕರ ಫೋಟೋ ಸೆರೆ ಹಿಡಿದು ಪಬ್ಲಿಕ್ ಐ ಆ್ಯಪ್ ಮೂಲಕ ಹಂಚಿಕೊಳ್ಳುವಂತೆ ಬೆಂಗಳೂರಿನ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಆಟೋ ಚಾಲಕರು ಸಮವಸ್ತ್ರ ಧರಿಸದೇ ಇದ್ದರೆ,
ಆಟೋದಲ್ಲಿ ಡಿಸ್ ಪ್ಲೇ ಕಾರ್ಡ್ ಹಾಕದಿರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿವೆ.
ಹೀಗಾಗಿ ಸಂಚಾರಿ ನಿಯಮ ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸಮವಸ್ತ್ರ ಧರಿಸದ ಹಾಗೂ ಡಿಸ್ ಪ್ಲೇ ಕಾರ್ಡ್ ಹಾಕದೇ ಆಟೋ ಚಲಾಯಿಸುವ ಚಾಲಕರ ಫೋಟೋ ತೆಗೆದು ಪಬ್ಲಿಕ್ ಐ ಆ್ಯಪ್ ಮೂಲಕ ಹಂಚಿಕೊಳ್ಳಬೇಕು ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

You may also like

Leave a Comment