Home » New Traffic Rules: ಬರಲಿದೆ ಹೊಸ ರೂಲ್ಸ್‌ ​| ವಾಹನಗಳ ನಂಬರ್ ಪ್ಲೇಟ್‌, ಟೋಲ್‌ ಪಾವತಿಯಲ್ಲಿ ಕೂಡಾ ಬದಲಾವಣೆ

New Traffic Rules: ಬರಲಿದೆ ಹೊಸ ರೂಲ್ಸ್‌ ​| ವಾಹನಗಳ ನಂಬರ್ ಪ್ಲೇಟ್‌, ಟೋಲ್‌ ಪಾವತಿಯಲ್ಲಿ ಕೂಡಾ ಬದಲಾವಣೆ

0 comments

ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತ ವ್ಯಸ್ತತೆಯಿಂದ ವಾಹನ ಸವಾರರಿಗೆ ಈ ಹೊಸ ನಿಯಮ ರೂಪಿಸಲಾಗಿದೆ . ಅದಲ್ಲದೆ ಟ್ರಾಫಿಕ್‌ ಕಿರಿ ಕಿರಿ, ಟೋಲ್ ಬೂತ್‌ನಿಂದ ಹಾದುಹೋಗಲು ಸಮಯ ವ್ಯರ್ಥ ಮುಂತಾದ ಸಮಸ್ಯೆಗಳು ಪ್ರತಿಯೊಬ್ಬರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಗಳು ಕೂಡ ಇವುಗಳ ಹೊರೆಯನ್ನು ಹೇಗಾದರೂ ತಪ್ಪಿಸಬೇಕೆಂಬ ನಿಟ್ಟಿನಲ್ಲಿ ಹೊಸ ಹೊಸ ಉಪಕ್ರಮಗಳನ್ನು ಜಾರಿಗೆ ತರುವುದರ ಜೊತೆಗೆ ಇದೀಗ ಹೊಸ ನಿಯಮ ಜಾರಿಗೆ ತರಲಾಗಿದೆ.

ಈ ಹೊಸ ಯೋಜನೆಯಿಂದ ಟೋಲ್‌ನಲ್ಲಿ ದೀರ್ಘ ಸರತಿ ಸಾಲುಗಳಲ್ಲಿ ಅಥವಾ ಹೆಚ್ಚು ಸಮಯ ಕಾಯುವ ಸಂಧರ್ಭ ಇರುವುದಿಲ್ಲ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಯಾವುದೇ ನಿಲುಗಡೆ ಇರುವುದಿಲ್ಲ.

ಮುಖ್ಯವಾಗಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವುದರಿಂದ ನೀವು ಹೆದ್ದಾರಿಗಳಲ್ಲಿ ಪ್ರಯಾಣಿಸಲು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಂದರೆ ಈ ಹೊಸ ವ್ಯವಸ್ಥೆಯು ನಿಮ್ಮ ಖಾತೆಯಿಂದ ಇನ್ನಷ್ಟು ಸುಲಭವಾಗಿ ಹಣವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ.

ಸದ್ಯ ಈ ಟೋಲ್‌ ಬಗ್ಗೆ ಟೋಲ್ ಟ್ಯಾಕ್ಸ್ ಎನ್ನುವುದು ಎಕ್ಸ್‌ಪ್ರೆಸ್‌ವೇ ಅಥವಾ ಹೆದ್ದಾರಿಯನ್ನು ದೇಶದಲ್ಲಿ ಎಲ್ಲಿಯಾದರೂ ಬಳಸಲು ನೀವು ಪಾವತಿಸುವ ಮೊತ್ತವಾಗಿದೆ. ಟೋಲ್‌ ಪಾವತಿ ಮಾಡುವುದು ಸಾಕಷ್ಟು ವಿಳಂಬದ ಕೆಲಸ ಆಗಿದೆ.

ಟೋಲ್ ಬೂತ್‌ನಿಂದ ಹಾದುಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಕಾಯುವಿಕೆಯನ್ನು ಕಡಿಮೆ ಮಾಡಲು ಸರ್ಕಾರ ಫಾಸ್ಟ್‌ಟ್ಯಾಗ್‌ ಅನ್ನು ಪರಿಚಯಿಸಿತ್ತು. ಇದು ಕೂಡ ಟೋಲ್‌ ಪಾವತಿಸಲು ಇರುವ ಒಂದು ಸರಳ ವಿಧಾನವಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ರಸ್ತೆಗಳು, ಟೋಲ್‌ಗಳು, ವಾಹನಗಳಿಗೆ ಸಂಬಂಧಿಸಿದಂತೆ ಇಲಾಖೆಯು ಟೋಲ್ ಸಂಗ್ರಹಿಸುವ ರೀತಿಯನ್ನು ಮತ್ತಷ್ಟು ಸುಲಭಗೊಳಿಸಲು ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ.

ಮುಖ್ಯವಾಗಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೇಶವನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಕೆಲಸ ಮಾಡುತ್ತಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಹೀಗಾಗಿ ಟೋಲ್‌ಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಸುವ ಬಗ್ಗೆ ಯೋಜನೆ ಆರಂಭಿಕ ಹಂತದಲ್ಲಿದೆ. ಈ ವ್ಯವಸ್ಥೆಯಲ್ಲಿ ಉಪಗ್ರಹ ಆಧಾರಿತ ಟೋಲ್-ಸಿಸ್ಟಮ್‌ನಲ್ಲಿ ಜಿಪಿಎಸ್ ಅನ್ನು ಕಾರಿನಲ್ಲಿ ಅಳವಡಿಸಲಾಗುವುದು ಮತ್ತು ಅದರಿಂದ ಟೋಲ್ ಅನ್ನು ಕಡಿತಗೊಳಿಸಲಾಗುತ್ತದೆ.

ಈಗಾಗಲೇ ನಿರಂತರವಾಗಿ ಈ ಎಲ್ಲಾ ವ್ಯವಸ್ಥೆಗಳಲ್ಲಿ, ಜಿಪಿಎಸ್ ಟೋಲ್ ವ್ಯವಸ್ಥೆ ಮತ್ತು ಹೊಸ ನಂಬರ್ ಪ್ಲೇಟ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದ್ದರಿಂದ ಈ ಕುರಿತು ಜಿಪಿಎಸ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಪಗ್ರಹದ ಮೂಲಕ ನೇರವಾಗಿ ನಿಗಾ ಇಡಬಹುದಾಗಿದೆ. ಈ ಉಪಕ್ರಮವನ್ನು ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮತ್ತು ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಕಾಯುವ ಅಗತ್ಯವಿರುವುದಿಲ್ಲ.

ಈಗಾಗಲೇ ಎಲ್ಲಾ ಹಳೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸುವುದಾಗಿ ಕೇಂದ್ರ ಹೇಳಿದೆ. ತಯಾರಕರು ಕೂಡ ಈ ನಂಬರ್ ಪ್ಲೇಟ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಹಳೆಯ ನಂಬರ್ ಪ್ಲೇಟ್‌ಗಳನ್ನು ಹೊಸ ನಂಬರ್ ಪ್ಲೇಟ್‌ಗಳೊಂದಿಗೆ ಬದಲಾಯಿಸಿ ನಂಬರ್ ಪ್ಲೇಟ್‌ನಲ್ಲಿ ಸ್ವಯಂಚಾಲಿತ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಮತ್ತು ಸಾಫ್ಟ್‌ವೇರ್ ಅನ್ನು ಲಗತ್ತಿಸಲಾಗುವುದು, ಇದರಿಂದ ಸ್ವಯಂಚಾಲಿತವಾಗಿ ಟೋಲ್ ಅನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಹೊಸ ನಿಯಮ ಪ್ರತಿಯೊಬ್ಬರಿಗೂ ಉತ್ತಮ ಪ್ರಯೋಜನ ಆಗಲಿದೆ. ಇದರಿಂದಾಗಿ ಸಾರ್ವಜನಿಕರ ಸಮಯ ಉಳಿತಾಯ ಆಗುತ್ತದೆ. ಅದಲ್ಲದೆ ಕಡಿಮೆ ಮಾಲಿನ್ಯ ಕೂಡ ಸಂಭವಿಸುತ್ತದೆ. ಈ ಮೇಲಿನ ಎಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರವು ಜಿಪಿಎಸ್ ಟೋಲ್ ವ್ಯವಸ್ಥೆ ಮತ್ತು ಹೊಸ ನಂಬರ್ ಪ್ಲೇಟ್ ವ್ಯವಸ್ಥೆಯ ಯೋಜನಾ ಜಾರಿಗೆಯನ್ನು ತರಲಾಗುತ್ತಿದೆ.

You may also like

Leave a Comment