Home » NMPT : ಮಂಗಳೂರು ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಆದವರಿಗೆ ಆದ್ಯತೆ | ಸಂಬಳ 1.40 ಲಕ್ಷ

NMPT : ಮಂಗಳೂರು ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಆದವರಿಗೆ ಆದ್ಯತೆ | ಸಂಬಳ 1.40 ಲಕ್ಷ

by Mallika
0 comments

NMPT Recruitment 2022: ನವ ಮಂಗಳೂರು ಬಂದರು ಟ್ರಸ್ಟ್(New Mangalore Port Trust )ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.

ಮಂಗಳೂರು (Mangalore)ಇಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಉದ್ಯೋಗದ ಸದುಪಯೋಗ ಮಾಡಬಹುದು. ಹಾಗಾಗಿ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ. ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಫ್‌ಲೈನ್(Offline)ನಲ್ಲಿ ಮಾತ್ರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 30/12/2022

ಸಂಸ್ಥೆ : ನವ ಮಂಗಳೂರು ಬಂದರು ಟ್ರಸ್ಟ್​
ಹುದ್ದೆ : ಅಸಿಸ್ಟೆಂಟ್ ಸೆಕ್ರೆಟರಿ
ಒಟ್ಟು ಹುದ್ದೆ : 2
ವೇತನ ಮಾಸಿಕ : ₹ 40,000-1,40,000
ಉದ್ಯೋಗದ ಸ್ಥಳ: ಮಂಗಳೂರು

ವಿದ್ಯಾರ್ಹತೆ: ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ : ಸೆಕ್ರೆಟರಿ I/c
ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು-575010

You may also like

Leave a Comment