Home » Heart Attack: ಕ್ರಿಕೆಟ್‌ ಆಡುವಾಗ ಕುಸಿದು ಬಿದ್ದು ಹೃದಯಾಘಾತ; ಆಸ್ಪತ್ರೆ ದಾರಿಯಲ್ಲೇ ಸಾವು!!!

Heart Attack: ಕ್ರಿಕೆಟ್‌ ಆಡುವಾಗ ಕುಸಿದು ಬಿದ್ದು ಹೃದಯಾಘಾತ; ಆಸ್ಪತ್ರೆ ದಾರಿಯಲ್ಲೇ ಸಾವು!!!

1 comment
Heart Attack

Noida: ಕೊರೊನಾ ನಂತರ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಲೇ ಇರುತ್ತದೆ. ಇದು ನಿಜಕ್ಕೂ ಆತಂಕದ ವಿಷಯ ಎಂದೇ ಹೇಳಬಹುದು. ಪ್ರತಿದಿನ ಹೃದಯಾಘಾತದಿಂದ ಯುವ ಜನತೆ ಸಾವನ್ನಪ್ಪುತ್ತಿರುವ ವರದಿ ಹೆಚ್ಚುತ್ತಲೇ ಇದೆ. ಇದೀಗ ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಕ್ರಿಕೆಟ್‌ ಮ್ಯಾಚ್‌ ಆಡುತ್ತಿದ್ದ ವ್ಯಕ್ತಿಯೋರ್ವ ರನ್‌ ತೆಗೆದುಕೊಳ್ಳುವಾಗ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಈ ವೇಳೆ ಅಲ್ಲಿದ್ದ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಘಟನೆ ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್‌ -135 ರಲ್ಲಿ ನಡೆದಿದೆ. ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್‌ ಆಡುವಾಗ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: Moodigere ಬಸ್‌ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ; ದಾಖಲಾಯ್ತು ಎರಡು ಪ್ರತ್ಯೇಕ ಪ್ರಕರಣ! ಯಾವುದು ಗೊತ್ತೇ?

ಉತ್ತರಖಂಡ ಮೂಲದ 36ವರ್ಷದ ವಿಕಾಸ್‌ ನೇಗಿ ಬ್ಯಾಟಿಂಗ್‌ ಮಾಡಲು ಬಂದಿದ್ದರು. ಆಟದ ವೇಳೆ ವಿಕಾಸ್‌ ಅವರು ರನ್‌ ತೆಗೆದುಕೊಳ್ಳಲೆಂದು ಓಡಿದ್ದಾರೆ. ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಉಳಿದ ಆಟಗಾರರು ಕೂಡಲೇ ವಿಕಾಸ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೆ. ಆದರೆ ವಿಧಿಯಾಟ, ವಿಕಾಸ್‌ ಉಳಿಯಲಿಲ್ಲ.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

You may also like

Leave a Comment