Home » ತನ್ನ ಪ್ರಿಯತಮನನ್ನು ಮರೆಯಲು ಅನಸ್ತೇಶಿಯಾದ ಮೊರೆಹೋದ ನರ್ಸ್! ಆಮೇಲೆ ಆದದ್ದೇನು ಗೊತ್ತಾ?

ತನ್ನ ಪ್ರಿಯತಮನನ್ನು ಮರೆಯಲು ಅನಸ್ತೇಶಿಯಾದ ಮೊರೆಹೋದ ನರ್ಸ್! ಆಮೇಲೆ ಆದದ್ದೇನು ಗೊತ್ತಾ?

by ಹೊಸಕನ್ನಡ
0 comments

ಜೀವನ ಅಂದಮೇಲೆ ಅಲ್ಲಿ ಪ್ರೀತಿ, ಪ್ರೇಮ, ಪ್ರಣಯದಂತಹ ಸನ್ನಿವೇಶಗಳು ಕಾಮನ್. ಪ್ರೀತಿಸಿದವರು ಅದೃಷ್ಟವಿದ್ದರೆ ಒಂದಾಗಿ, ಜೀವನ ಪರ್ಯಂತ ಜೊತೆಗಿರುತ್ತಾರೆ ಇಲ್ಲ ತಮ್ಮ ದಾರಿ ಹಿಡಿದು ನಡೆಯುತ್ತಾರೆ. ಆದರೆ ಕೆಲವೊಮ್ಮೆ ತಮ್ಮ ಪ್ರೀತಿ ಪವಿತ್ರವಾಗಿದ್ದು, ನಿಜವಾಗಿದ್ದು ಅದು ತಮಗೆ ದಕ್ಕುವುದಿಲ್ಲವೆಂದು ಗೊತ್ತಾದ ಬಳಿಕ, ಆ ಪ್ರೇಮವೈಫಲ್ಯದ ನೋವಿನಿಂದ ಹೊರಬರಲು, ಪ್ರೇಮಿಯನ್ನು ಮರೆಯಲು ಭಗ್ನಪ್ರೇಮಿಗಳು ನಾನಾ ಕಸರತ್ತು ಮಾಡುತ್ತಾರೆ. ಅದೇ ಥರ ಇಲ್ಲೊಬ್ಬಳು ನರ್ಸ್​ ತನ್ನ ಪ್ರೇಮವೈಫಲ್ಯ ಮರೆಯಲು ಏನು ಮಾಡಿದ್ದಾಳೆ ಗೊತ್ತಾ? ಒಂದು ಮಾಡಲು ಹೋಗಿ ಮತ್ತೊಂದು ಅನಾಹುತವಾಗಿ, ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ, ನರ್ಸ್ ಒಬ್ಬಳು ತನ್ನ ಪ್ರೇಮದ ನೋವನ್ನು ಮರೆಯಲು ಅರಿವಳಿಕೆ ಚುಚ್ಚಮದ್ದು ಚುಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಹೌದು, ಪೂಜಾ ಗಂಜನ್​ ಎಂಬ 27 ವರ್ಷದ ಈ ಹುಡುಗಿ ಪ್ರೇಮವೈಫಲ್ಯಕ್ಕೆ ಒಳಗಾಗಿ, ಆ ನೋವಿನಿಂದ ಹೊರಬರಲು ಮತ್ತು ಪ್ರಿಯತಮನನ್ನು ಮರೆಯಲು ಅನಸ್ತೇಷಿಯಾವನ್ನು ತೆಗೆದುಕೊಂಡಿದ್ದಳು, ಅದು ಓವರ್​ಡೋಸ್​ ಆಗಿ, ಆಕೆ ಪ್ರಾಣವನ್ನೇ ಕಳೆದುಕೊಂಡಂತಹ ಅವಮಾನವೀಯ ಘಟನೆ ಇದೀಗ ಬೆಳಕಿಗೆ ಬಂದಿದೆ.

ಅನಸ್ತೇಷಿಯಾ ಪಡೆಯುವ ಮೊದಲು ಆಕೆ ಡೆತ್​ನೋಟ್ ಬರೆದಿಟ್ಟಿದ್ದು, ಆಸ್ಪತ್ರೆಯ ಸಹೋದ್ಯೋಗಿಯೊಂದಿಗೆ ಸಂಬಂಧ ಇರುವುದನ್ನು ತಿಳಿಸಿದ್ದಾಳೆ. ಆದರೆ ತಾನು ಪ್ರೀತಿಸುತ್ತಿದ್ದವ ಬೇರೆ ಮೆಡಿಕಲ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದಲ್ಲದೆ, ಇನ್ನೊಬ್ಬಳನ್ನು ಮದುವೆಯಾದ ಎಂಬುದನ್ನೂ ತಿಳಿಸಿದ್ದಾಳೆ. ಬಳಿಕ ಇದರ ಮೂಲಕ ಆಕೆಯ ಪ್ರಿಯತಮನನ್ನು ಪೋಲಿಸರು ಬಂದಿಸಿದ್ದು, ತನಗೆ ಬೇರೆಯವರೊಂದಿಗೆ ಮದುವೆ ನಿಗದಿಯಾಗಿದೆ, ನಾವಿಬ್ಬರು ಮದುವೆ ಆಗಲು ಆಗುವುದಿಲ್ಲ ಎಂಬುದನ್ನು ಮೊದಲೇ ಹೇಳಿದ್ದೆ ಎಂಬುದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment