Singer debesh pati arrested: ಯುವತಿ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಖ್ಯಾತ ಗಾಯಕ (Singer) ಅರೆಸ್ಟ್ ಆಗಿದ್ದಾರೆ. ದೆಬೆಶ್ ಪತಿ(Singer debesh pati arrested ) ಎಂಬಾತನೇ ಅರೆಸ್ಟ್ ಆದ ಗಾಯ. ಸಿಂಗರ್ ಯುವತಿ ಮೇಲೆ ಮದುವೆಯ ಭರವಸೆ ನೀಡಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ, ವಂಚನೆ, ಐಟಿ ಆಕ್ಟ್ ಕೇಸ್ ದಾಖಲು ಮಾಡಲಾಗಿದೆ ಎಂದು ನಾಯಪಲ್ಲಿ ಸ್ಟೇಷನ್‌ನ ಇನ್ಸ್‌ಪೆಕ್ಟರ್ ಸತ್ಯರಂಜನ್ ಪ್ರಧಾನ್ ತಿಳಿಸಿದ್ದಾರೆ.
ಯುವತಿ ತನ್ನ ದೂರಿನಲ್ಲಿ ಹಲವಾರು ಆರೋಪ ಮಾಡಿದ್ದಾರೆ. ದೆಬೆಶ್ ಪತಿ ಮದುವೆಯಾಗುವುದಾಗಿ ಹೇಳಿ ಹಲವು ಸಲ ದೈಹಿಕ ಸಂಬಂಧ ಹೊಂದಿದ್ದಾರೆ. ನಾನು ಗರ್ಭಿಣಿಯಾಗಿದ್ದೇನೆ. ಗರ್ಭ ತೆಗೆಸುವಂತೆ ಗಾಯಕ ಬಲವಂತ ಮಾಡಿದ್ದ. ಮದುವೆಯಾಗಬೇಕು ಎಂದು ಕೇಳಿದಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ತನ್ನ ಆರೋಪದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ʼಆಂಟಿ ಪ್ರೀತ್ಸೆʼ ಎಂದ ಯುವಕನ ಬರ್ಬರ ಕೊಲೆ! ಕೊಲೆಯ ಹಿಂದಿತ್ತು ಸಿರಿವಂತನ ಮೋಹ, ಬಿಗ್ ಟ್ವಿಸ್ಟ್ ಬಹಿರಂಗ!!!
