Home » Odisha Train Accident: ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರದ ಜೊತೆಗೆ ಉದ್ಯೋಗ; ಹಲವು ಪರಿಹಾರ ಘೋಷಣೆ ಮಾಡಿದ ರಿಲಯನ್ಸ್‌

Odisha Train Accident: ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರದ ಜೊತೆಗೆ ಉದ್ಯೋಗ; ಹಲವು ಪರಿಹಾರ ಘೋಷಣೆ ಮಾಡಿದ ರಿಲಯನ್ಸ್‌

by Mallika
0 comments
Odisha train Accident

Odisha Train Accident: ಒಡಿಶಾ ರೈಲು ದುರಂತ (Odisha Train Accident) ದೇಶವನ್ನು ನಡುಗಿಸಿದ ಘಟನೆ. ಈ ದುರ್ಘಟನೆಯಲ್ಲಿ ಕಂಡ ಸಾವು ನೋವು ಮನುಷ್ಯರ ಮನಸ್ಸನ್ನೇ ಕದಡಿಸಿ ಬಿಟ್ಟಿದೆ. ತನ್ನ ಕಣ್ಣಮುಂದೆ ಇದ್ದ ಮಗ, ಮಕ್ಕಳು, ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಹೇಳತೀರದು. ಈಗಲೂ ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕೆಲವೊಂದು ಮನಸ್ಸಿಗೆ ಖುಷಿ ನೀಡೋ ವಿಚಾರ ಬೆಳಕಿಗೆ ಬಂದಿದೆ. ಹಲವಾರು ಸಂಸ್ಥೆಗಳು ರೈಲು ದುರಂತದ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದೆ. ರಿಲಯನ್ಸ್‌ ಫೌಂಡೇಶನ್‌ ಮತ್ತು ವಿಪತ್ತು ನಿರ್ವಹಣಾ ತಂಡ ಯೋಜನೆ ಜೊತೆಗೆ 10 ಪರಿಹಾರವನ್ನು ಘೋಷಣೆ ಮಾಡಿದೆ.

ಈ ತಂಡವು ದಿನದ ಇಪ್ಪತ್ತನಾಲ್ಕು ಗಂಟೆ ಕೂಡಾ ಗಾಯಾಳುಗಳಿಗೆ ನೆರವು ಹಾಗೂ ಸಹಾಯ ನೀಡುತ್ತದೆ. ಈ ಘಟನೆಯಲ್ಲಿ ಸಂತ್ರಸ್ತರ ನೋವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡಲು ನಮಗೆ ಸಾಧ್ಯವಿಲ್ಲ. ಆದರೆ ಭವಿಷ್ಯಕ್ಕಾಗಿ ಅಗತ್ಯವಾದುದನ್ನು ಮಾಡಲು ನಾವು ತಯಾರಿದ್ದೇವೆ ಎಂದು ಫೌಂಡೇಶನ್‌ ನ ಸಂಸ್ಥಾಪಕಿ ನೀತಾ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಫೌಂಡೇಷನ್ ಹತ್ತು ಪರಿಹಾರ ಘೋಷಣೆ ಇಂತಿದೆ;
ರಿಲಯನ್ಸ್ ಸ್ಟೋರ್‌ಗಳ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಮುಂದಿನ ಆರು ತಿಂಗಳವರೆಗೆ ಹಿಟ್ಟು, ಸಕ್ಕರೆ, ಬೇಳೆ, ಅಕ್ಕಿ, ಉಪ್ಪು ಮತ್ತು ಅಡುಗೆ ಎಣ್ಣೆ ಸೇರಿದಂತೆ ಉಚಿತ ಪಡಿತರ ಸರಬರಾಜು,‌ವಿಪತ್ತನ್ನು ನಿಭಾಯಿಸುವ ಆಂಬ್ಯುಲೆನ್ಸ್‌ಗಳಿಗೆ ಜಿಯೋ-ಬ್ರಿಟಿಷ್ ಪೆಟ್ರೋಲಿಯಂ ಜಾಲದ ಮೂಲಕ ಉಚಿತ ಇಂಧನ, ಭಾವನಾತ್ಮಕ ಮತ್ತು ಮಾನಸಿಕ ಬೆಂಬಲಕ್ಕಾಗಿ ಸಮಾಲೋಚನೆ ಸೇವೆಗಳು, ಗಾಲಿಕುರ್ಚಿಗಳು, ಕೃತಕ ಅಂಗಗಳು ಸೇರಿದಂತೆ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಬೆಂಬಲ, ಸಹಾಯ, ಗಾಯಗೊಂಡವರಿಗೆ ಅವರ ತಕ್ಷಣದ ಚೇತರಿಕೆ ಅಗತ್ಯಗಳನ್ನು ಬೆಂಬಲಿಸಲು ಉಚಿತ ಔಷಧಗಳು; ಆಸ್ಪತ್ರೆಯ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ, ಅಗತ್ಯದ ಆಧಾರದ ಮೇಲೆ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಜಿಯೋ ಮತ್ತು ರಿಲಯನ್ಸ್ ರೀಟೇಲ್ ಮೂಲಕ ಉದ್ಯೋಗಾವಕಾಶ, ಅಪಘಾತಕ್ಕೆ ಈಡಾದ ಗ್ರಾಮೀಣ ಕುಟುಂಬಗಳಿಗೆ ಪರ್ಯಾಯ ಜೀವನೋಪಾಯಕ್ಕಾಗಿ ಹಸು, ಎಮ್ಮೆ, ಮೇಕೆ, ಕೋಳಿ ಮುಂತಾದ ಜಾನುವಾರುಗಳನ್ನು ಒದಗಿಸುವುದು, ವಿಪತ್ತಿಗೆ ಗುರಿಯಾದವರ ಜೀವನೋಪಾಯ ಮತ್ತೆ ಸಾಗುವುದಕ್ಕೆ ಒಂದು ವರ್ಷದವರೆಗೆ ದುಃಖಿತರ ಕುಟುಂಬದ ಸದಸ್ಯರಿಗೆ ಉಚಿತ ಮೊಬೈಲ್ ಸಂಪರ್ಕ,
ಹೊಸ ಉದ್ಯೋಗಾವಕಾಶಗಳನ್ನು ಹುಡುಕಲು ವಿಶೇಷ ಕೌಶಲ ತರಬೇತಿ, ಕುಟುಂಬದಲ್ಲಿ ದುಡಿಯುತ್ತಿದ್ದ ಒಬ್ಬರೇ ಸದಸ್ಯರನ್ನು ಕಳೆದುಕೊಂಡವರಿದ್ದಲ್ಲಿ ಮಹಿಳೆಯರಿಗೆ ಕಿರುಬಂಡವಾಳ ಮತ್ತು ತರಬೇತಿ ಅವಕಾಶಗಳು

ಇದನ್ನೂ ಓದಿ: Odisha train Tragedy: ಒಡಿಶಾ ರೈಲು ದುರಂತಸಲ್ಲಿ ಸತ್ತ 101 ಮೃತದೇಹಗಳ ಮಾಹಿತಿ ಇನ್ನೂ ಸಿಕ್ಕಿಲ್ಲ

You may also like

Leave a Comment