Home » Shivamogga :ಒಳಮೀಸಲಾತಿ ಪ್ರತಿಭಟನೆ; ಬಿಎಸ್ ವೈ ಮನೆಗೆ ಕಲ್ಲು ತೂರಾಟ, ಸೆಕ್ಷನ್ 144 ಜಾರಿ!

Shivamogga :ಒಳಮೀಸಲಾತಿ ಪ್ರತಿಭಟನೆ; ಬಿಎಸ್ ವೈ ಮನೆಗೆ ಕಲ್ಲು ತೂರಾಟ, ಸೆಕ್ಷನ್ 144 ಜಾರಿ!

0 comments
Shivamogga

Shivamogga: ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ವಿಂಗಡಣೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಇದೀಗ ಈ ಪ್ರತಿಭಟನೆ ತಾರಕಕ್ಕೇರಿದೆ. ಇದರ ಪರಿಣಾಮ ಬಿಎಸ್ ಯಡಿಯೂರಪ್ಪ (B S Yediyurappa) ಅವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರತಿಭಟನಾಕಾರರು ಶಿಕಾರಿಪುರದ (Shivamogga, Shikaripura) ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಬಿಎಸ್ ವೈ ನಿವಾಸದ ಮುಂದೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದಿಷ್ಟೇ ಅಲ್ಲದೆ, ಅವರ ನಿವಾಸದ ಬಿಜೆಪಿ ಗೃಹ ಕಚೇರಿಯ ಮೇಲಿದ್ದ ಬಿಜೆಪಿ ಬಾವುಟವನ್ನು ತೆರವುಗೊಳಿಸಿ, ಭೋವಿ, ಕೊರಚ ಹಾಗೂ ಬಂಜಾರ ಸಮುದಾಯದ ಬಾವುಟಗಳನ್ನು ಹಾಕಿ ಪ್ರತಿಭಟನಾಕಾರರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದು, ಕೊನೆಗೆ ಬಿಎಸ್ ವೈ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಶಿಕಾರಿಪುರದ ತಹಶೀಲ್ದಾರ್ ವಿಶ್ವನಾಥ್ ರ ಆದೇಶದ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

You may also like

Leave a Comment