Home » ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ, ಪೇಟ ಎಸೆದ ಮಾಜಿ ಸಿಎಂ ಸಿದ್ದರಾಮಯ್ಯ

ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ, ಪೇಟ ಎಸೆದ ಮಾಜಿ ಸಿಎಂ ಸಿದ್ದರಾಮಯ್ಯ

by Praveen Chennavara
0 comments

ಸಿದ್ದರಾಮಯ್ಯ ಅವರಿಗೆ ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ,ಪೇಟ ಬಿಸಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಗಲಕೋಟೆ ಭೇಟಿ ವೇಳೆಯಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮ ಪಂಚಾಯತ್ ‌ನ ಕಟ್ಟಡ ಉದ್ಘಾಟನೆಗೆ ತೆರಳಿದ್ದರು.

ಆ ವೇಳೆ ಅಭಿಮಾನಿಯೋರ್ವ ಕೇಸರಿ ಪೇಟ ತೊಡಿಸಲು ಬಂದಿದ್ದಾನೆ. ಸಿದ್ದರಾಮಯ್ಯನವರು ಬೇಡ ಎಂದು ನಿರಾಕರಿಸಿದ್ದಾರೆ.

ಆದರೆ ಅಭಿಮಾನಿ ರುಮಾಲು ತಂದು ತಲೆಗೆ ಇಟ್ಟಿದ್ದಾನೆ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸೆದು ಅಭಿಮಾನಿ ವಿರುದ್ಧ ಗರಂ ಆಗಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

You may also like

Leave a Comment