Home » Pakistan : ಭಾರತದ ಮೇಲೆ ಪಾಕ್ ದಾಳಿ – 16 ಅಮಾಯಕರು ಬಲಿ

Pakistan : ಭಾರತದ ಮೇಲೆ ಪಾಕ್ ದಾಳಿ – 16 ಅಮಾಯಕರು ಬಲಿ

0 comments

 

Pakistan : ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಯೋತ್ಪಾಕರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಭಾರತ ಈ ದಾಳಿಗೆ ಪ್ರತಿದಾಳಿ ಮಾಡಲು ಪಾಕಿಸ್ತಾನ ಮುಂದಾಗಿದ್ದು ಗುರುವಾರ ಜಮ್ಮುವಿನ ಮೇಲೆ ಕ್ಷಿಪಣಿ ದಾಳಿ ಮಾಡುವ ಪ್ರಯತ್ನ ಮಾಡಿದೆ. ಈ ವೇಳೆ ಭಾರತ ಎಂಟು ಕ್ಷಿಪಣಿಗಳನ್ನು ಹೊಡೆದು ಉರುಳಿಸಿದೆ. ಆದರೂ ಈ ಸಮಯದಲ್ಲಿ ಪಾಕ್ ಮಾಡಿದ ದಾಳಿಯಿಂದಾಗಿ ಭಾರತದ 16 ಅಮಾಯಕರು ಬಲಿಯಾಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

 

ಹೌದು, ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳ ಈ ಕುರಿತು ಮಾಹಿತಿ ನೀಡಿದ್ದು, ಭಾರತದ 12 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆಯು ದಾಳಿಗೆ ಪ್ರತ್ಯುತ್ತರ ನೀಡಿದೆ. ಪಾಕ್ ನಡೆಸಿದ ದಾಳಿಯಲ್ಲಿ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನ ನಮ್ಮ ದೇಶದ ಹಲವಡೆ ದಾಳಿಗೆ ಪ್ರಯತ್ನಿಸುತ್ತಿದ್ದಾರೆ ಎಂದಿದೆ.

You may also like