Home » ಪಂಚರಾಜ್ಯಗಳ ಚುನಾವಣೆ : ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್

ಪಂಚರಾಜ್ಯಗಳ ಚುನಾವಣೆ : ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್

0 comments

ಪ್ರಯಾಗ್ ರಾಜ್ : ಮಂಗಳವಾರ ಪೆರೇಡ್ ಗ್ರೌಂಡ್ ನಲ್ಲಿ ರೈತರ ಮೂರು ದಿನಗಳ‌’ ಚಿಂತನ ಶಿಬಿರ’ ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿಸಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಭಾರತೀಯ ಕಿಸಾನ್ ಯೂನಿಯನ್ ರಾಜಕೀಯ ಪಕ್ಷಕ್ಕೆ ಬೆಂಬಲವನ್ನು ನೀಡುತ್ತದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.

” ಪಂಚರಾಜ್ಯಗಳ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಅವರು ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ- ಸಮಾಜವಾದಿ ಪಕ್ಷದ ಮೈತ್ರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ ನಂತರ ರಾಕೇಶ್ ಟಿಕಾಯತ್ ತಮ್ಮ ಈ ಹೇಳಿಕೆಯನ್ನು ಹೇಳಿದ್ದಾರೆ.

You may also like

Leave a Comment