Home » ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ | ಬೈದು ಬುದ್ಧಿ ಹೇಳಬೇಕಾದ ಅಪ್ಪ-ಅಮ್ಮ, ಆಸಿಡ್ ಸುರಿದು ಮಗಳನ್ನು ಕೊಂದೇ ಬಿಟ್ಟರು!

ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ | ಬೈದು ಬುದ್ಧಿ ಹೇಳಬೇಕಾದ ಅಪ್ಪ-ಅಮ್ಮ, ಆಸಿಡ್ ಸುರಿದು ಮಗಳನ್ನು ಕೊಂದೇ ಬಿಟ್ಟರು!

by ಹೊಸಕನ್ನಡ
0 comments

ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳುತ್ತಾರೆ. ಹೌದು, ತಂದೆ ತಾಯಿಯರಿಗೆ ತಮ್ಮ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಮಕ್ಕಳು ಹೇಗೇ ಇರಲಿ, ಏನೇ ತಪ್ಪು ಮಾಡಲಿ ಅವರಿಗೆ ಮಾತ್ರ ಮಕ್ಕಳ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗದು. ಕೋಪ ಬಂದಾಗ ನಾಲ್ಕು ಪೆಟ್ಟು ಹೊಡೆದಾರೆ ಹೊರತು, ಸಿಟ್ಟಲ್ಲಿ ನಾಲ್ಕು ಮಾತು ಬೈದರೆ ಹೊರತು ಎಂದಿಗೂ ಅವರನ್ನು ಬಿಟ್ಟಿಕೊಡುವ ಮಾತೇ ಬರುವುದಿಲ್ಲ. ಆದರೆ ಇಲ್ಲೊಂದು ಘಟನೆ ಜಗತ್ತಿನಲ್ಲಿ ಇಂತಹ ಕ್ರೂರ ಮೃಗಗಳ ಹಾಗೆ ವರ್ತಿಸೋ ಅಪ್ಪ ಅಮ್ಮನೂ ಈ ಪ್ರಪಂಚದಲ್ಲಿದ್ದಾರೋ ಎನಿಸಿ ಅವರ ಕುರಿತು ಅಸಹ್ಯ ಭಾವನೆ ತರಿಸುತ್ತದೆ. ಅಷ್ಟಕ್ಕೂ ಆ ರಾಕ್ಷಸ ಪೋಷಕರು ತಮ್ಮ ಮಗಳಿಗೆ ಮಾಡಿದ್ದೇನು ಗೊತ್ತಾ? ಕೇಳಿದ್ರೆ ನೀವೂ ಸಹ ಗಾಬರಿ ಬೀಳ್ತೀರಾ!

ಹೆತ್ತ ತಂದೆ- ತಾಯಿಯೇ ತಮ್ಮ ಇಬ್ಬರು ಸಂಬಂಧಿಕರ ಸಹಾಯದಿಂದ 21 ವರ್ಷದ ಮಗಳನ್ನು ಕ್ರೂರವಾಗಿ ಸಾಯಿಸಿ, ದೇಹ ಗುರುತಿಸಲು ಸಾಧ್ಯವಾಗದಂತೆ ಆಸಿಡ್ ಸುರಿದು ಬಿಸಾಕಿದ ಅವಮಾನಕರವಾದ ಪ್ರಕರಣವೊಂದು ಎಲ್ಲರನ್ನೂ ದಂಗುಬಡಿಸಿದೆ. ತೇನ್ ಷಾ ಅಲಮಾಬಾದ್ ಗ್ರಾಮದ ನಿವಾಸಿ ನರೇಶ್ ಅವರು ಫೆಬ್ರವರಿ 3 ರಂದು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದರು. ಇದೀಗ ಗ್ರಾಮದ ಹೊರಗಿನ ಕಾಲುವೆಯಿಂದ ಆಕೆಯ ದೇಹವನ್ನು ವಿರೂಪಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದ್ದು, ನೆನೆದರೆ ಮೈ ನಡುಗುವಂತಹ ಭೀಕರ ಕೃತ್ಯವನ್ನು ಈ ತಂದೆ ತಾಯಿಯೇ ಮಾಡಿರುವುದು ತಿಳಿದು ಬಂದಿದೆ.

ತನಿಖೆ ವೇಳೆ, ತಂದೆ ನರೇಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ ಅವರ ಮಗಳು ಅನೇಕ ಹುಡುಗರೊಂದಿಗೆ ಸದಾ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆಕೆಯ ವ್ಯಾನಿಟಿ ಬ್ಯಾಗ್​ನಲ್ಲಿ ಕೆಲವು ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳೂ ಪತ್ತೆಯಾಗಿದ್ದವು. ಇದರಿಂದ ನರೇಶ್‌, ತಮ್ಮ ಮಗಳು ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾರೆ. ಇದರಿಂದ ಕೋಪಗೊಂಡು ಕುಕೃತ್ಯವೆಸಗಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ನರೇಶ್ ಮತ್ತು ಅವರ ಪತ್ನಿ ಶೋಭಾ ದೇವಿ ಫೆಬ್ರವರಿ 3 ರಂದು ತಮ್ಮ ಮನೆಯಲ್ಲಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ. ಬಳಿಕ, ಗುರುತು ಮರೆಮಾಚಲು ದೇಹದ ಮೇಲೆ ಬ್ಯಾಟರಿ ಆಸಿಡ್ ಸುರಿದಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಮೃತದೇಹವನ್ನು ಮರೆಮಾಚಲು ಸಹಾಯ ಮಾಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ ಎಂದು PTI ವರದಿ ಮಾಡಿದೆ.

ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಕೇವಲ ಪ್ರೆಗ್ನೆನ್ಸಿ ಕಿಟ್ ಪತ್ತೆಯಾಗಿದ್ದಕ್ಕೆ ಈ ರೀತಿಯ ರಾಕ್ಷಸ ಕೃತ್ಯವೆಸಗಿದ ತಂದೆ ತಾಯಿಗೆ ಏನನ್ನಬೇಕು ಹೇಳಿ. ಮಕ್ಕಳು ದಾರಿ ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳುತ್ತಾರೆ. ಆದರೆ ಏಕಾ ಏಕಿ ಕೊಲೆ ಮಾಡುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದರೆ ಅವರ ಮನಸ್ಸಾದರೂ ಎಂತದ್ದು. ಅಷ್ಟು ಕಲ್ಲು ಹೃದಯವೇ ಅವರದ್ದು?

You may also like

Leave a Comment