Home » Talaq: ತಾಳಿ ಕಟ್ಟಿ 12 ಗಂಟೆ ಆದದ್ದಷ್ಟೇ.. ಗಂಡನಿಗೆ ತ್ರಿವಳಿ ತಲಾಕ್ ಕೊಟ್ಟ ಹೆಂಡತಿ !!

Talaq: ತಾಳಿ ಕಟ್ಟಿ 12 ಗಂಟೆ ಆದದ್ದಷ್ಟೇ.. ಗಂಡನಿಗೆ ತ್ರಿವಳಿ ತಲಾಕ್ ಕೊಟ್ಟ ಹೆಂಡತಿ !!

1 comment
Talaq

Talaq: ಮದುವೆ ಆದಮೇಲೆ ಪತಿ ಪತ್ನಿ ನೂರಾರು ಕಾಲ ಸುಖವಾಗಿ ಬಾಳಬೇಕು ಎಂದು ಎಲ್ಲರೂ ಹಾರೈಕೆ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಕೆಲವೇ ಘಂಟೆಗಳಲ್ಲಿ ಮುರಿದು ಬಿದ್ದಿದೆ. ಹೌದು, ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನವವಿವಾಹಿತ ಮಹಿಳೆ ಮದುವೆಯಾದ 12 ಗಂಟೆಗಳಲ್ಲಿ ತನ್ನ ಪತಿಗೆ ತ್ರಿವಳಿ ತಲಾಖ್ (Talaq) ನೀಡಿದ್ದಾಳೆ.

ವರ ಗುಲಾಂ ನಬಿ ನಾವಡಾದ ಅನ್ಸಾರ್ ನಗರದ ನಿವಾಸಿಯಾಗಿದ್ದು, ಫುಲ್ವಾರಿ ಷರೀಫ್‌ನ ಇಮಾಮ್ ಕಾಲೋನಿಯಲ್ಲಿರುವ ಸಮುದಾಯ ಕೇಂದ್ರದಲ್ಲಿ ಅದ್ದೂರಿಯಾಗಿ ವಿವಾಹವನ್ನು ನಡೆಸಲಾಯಿತು. ಮದುವೆ ಸಮಾರಂಭದಲ್ಲಿ ಊಟದ ವಿಚಾರವಾಗಿ ವಧು-ವರರ ಕಡೆಯವರ ನಡುವೆ ಜಗಳವಾಗಿತ್ತು. ಮದುವೆ ವೇಳೆ ಊಟ ಬಡಿಸುತ್ತಿರುವ ಬಗ್ಗೆ ವರನ ಕಡೆಯವರು ಕೆಲವು ಆರೋಪ ಮಾಡಿ ದೂರಿದ್ದಾರೆ. ಈ ವಿಚಾರವಾಗಿ ಇಬ್ಬರ ಕುಟುಂಬದ ನಡುವೆ ವಾಗ್ವಾದ ನಡೆದಿದೆ.

ಈ ಸಮಯದಲ್ಲಿ ವರ ಗುಲಾಂ ನಬಿ ವಧುವಿನ ಸಹೋದರನೊಂದಿಗೆ ಮಾತಿನ ಚಕಮಕಿ ನಡೆಸಿ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಿಂದ ನೊಂದು ವಧು ಅಂತಿಮವಾಗಿ ಮದುವೆಯನ್ನು kಮುರಿಯಲು ನಿರ್ಧರಿಸಿದರು, ಆದ್ದರಿಂದ ಮದುವೆಯಾದ 12 ಗಂಟೆಗಳಲ್ಲಿ ಭಾನುವಾರ ಬೆಳಗ್ಗೆ ಮಹಿಳೆ ವರನಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ.

ಇದನ್ನೂ ಓದಿ: ರೈತರೇ ಗಮನಿಸಿ- APMC ಕಾಯ್ದೆ ಕುರಿತು ರಾಜ್ಯ ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್

You may also like

Leave a Comment