Home » ಶಿವಮೊಗ್ಗ : ಫೋಟೋ ತೆಗೆಯುವಾಗಲೇ ಹೃದಯಾಘಾತಕ್ಕೊಳಗಾದ ಫೋಟೋಗ್ರಾಫರ್ | ಸಮಾರಂಭವೊಂದರಲ್ಲಿ ನಡೆದ ಘಟನೆ

ಶಿವಮೊಗ್ಗ : ಫೋಟೋ ತೆಗೆಯುವಾಗಲೇ ಹೃದಯಾಘಾತಕ್ಕೊಳಗಾದ ಫೋಟೋಗ್ರಾಫರ್ | ಸಮಾರಂಭವೊಂದರಲ್ಲಿ ನಡೆದ ಘಟನೆ

0 comments

ಶಿವಮೊಗ್ಗ : ಸಾವು ಯಾವಾಗ ಯಾವ ರೀತಿಯಲ್ಲಿ ನಮ್ಮನ್ನು ಆವರಿಸುತ್ತೆ ಎನ್ನುವುದೋ ದೊಡ್ಡ ಯಕ್ಷ ಪ್ರಶ್ನೆ ಎಂದೇ ಹೇಳಬಹುದು. ಹಾಗೆನೇ ಇತ್ತೀಚಿನ ದಿನಗಳಲ್ಲಿ ಸಾವು ವಯಸ್ಸು ನೋಡಿ ಬರುವುದಿಲ್ಲ. ಅಂತಹುದೇ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವನಪ್ಪಿದ ಘಟನೆಯೊಂದು ನಡೆದಿದೆ. ಈ ಘಟನೆ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೆಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಸಾಗರ ಪಟ್ಟಣದ ರಾಮನಗರದ ಚಂದ್ರು (42) ಮೃತ ದುರ್ದೈವಿ.

ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು. ಇನ್ನು ಸಾಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

You may also like

Leave a Comment