Home » ಸರಗಳ್ಳತನ : ಬೈಕ್ನಲ್ಲಿ ಬಂದು ಸರಕಿತ್ತು ಪರಾರಿ.

ಸರಗಳ್ಳತನ : ಬೈಕ್ನಲ್ಲಿ ಬಂದು ಸರಕಿತ್ತು ಪರಾರಿ.

0 comments

ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಸೋಮವಾರ ಬೆಳಂಬೆಳಿಗ್ಗೆ ಜರುಗಿದೆ.

ವಾಯು ವಿಹಾರ ಮುಗಿಸಿ ಇನ್ನೇನು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಶಾರದಾ(62 ) ಎನ್ನುವ ವೃದ್ದ ಮಹಿಳೆಯ ಕೊರಳ ಮಾಂಗಲ್ಯ ಚೈನ್ ಕಿತ್ತು ಪರಾರಿಯಾದ ಘಟನೆ ನಡೆದಿದ್ದು ಅಂದಾಜು 3.5 ತೋಲೆ ಅಂದಾಜು 1.5ಲಕ್ಷ ಮೌಲ್ಯದ ಚೈನ್ ಆಗಿದೆ.

ದಂಪತಿಗಳ ಚಲನವಲನ ಗಮನಿಸಿದ ಯುವಕರು ಬೈಕ್ನಲ್ಲಿ ಆಗಮಿಸಿ ಮಹಿಳೆಯ‌ ಕೊರಳಿಗೆ ಕೈಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಿಗ್ಗೆ 6.18ಕ್ಕೆ ನಡೆದ ಘಟನೆ ಸಂಪೂರ್ಣ ಚಲನವಲನ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿದ್ದು ವಿಷಯ ತಿಳಿಯುತ್ತಲೆ‌ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಗೆ ಸಾಂತ್ವನ ಹೇಳಿ ದೈರ್ಯತುಂಬಿದ್ದು ಪ್ರಕರಣ ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ ಎಂ ಸಿಬ್ಬಂದಿಗಳಾದ ಫಣಿರಾಜ್ ಹಾಗೂ ಪೊಲೀಸರು ಭೇಟಿ, ಪರಿಶೀಲನೆ ಆರಂಭಿಸಿದ್ದಾರೆ.

You may also like

Leave a Comment