PM Modi Road Show: ಪ್ರಧಾನಿ ನರೇಂದ್ರ ಮೋದಿಯವರು ಮೇ.7ರಂದು ಬೆಂಗಳೂರಿನಲ್ಲಿ ರೋಡ್ ಶೋ(PM Modi Road Show) ಮಾಡಲಿದ್ದಾರೆ. ಈ ಬಾರಿಯ ಚುನಾವಣೆ ಮೇ.10 ರಂದು ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಇದೆಲ್ಲ ನಡೆಯಲಿದೆ. ಆದರೆ ವಿದ್ಯಾರ್ಥಿಗಳೇ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ ಗಮನಿಸಿ. ಏನೆಂದರೆ ಅದೇ ದಿನ ನೀಟ್ ಎಕ್ಸಾಂ ಕೂಡಾ ನಡೆಯಲಿರುವುದರಿಂದ, ಮೋದಿ ರೋಡ್ ಶೋ ಕೂಡಾ ಇರುವುದರಿಂದ ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಸಂಚಾರ ವ್ಯವಸ್ಥೆ ನಿರ್ಬಂಧವಾಗಲಿದೆ.
ಮೇ.7ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಅದರಲ್ಲೂ ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಬರೆಯುವವರು ಆ ದಿನ ನಿಗದಿತ ಸಮಯಕ್ಕಿಂತ ಮೊದಲೇ ಪರೀಕ್ಷಾ ಕೇಂದ್ರ ತಲುಪುವುದು ಒಳ್ಳೆಯದು.
ಬೆಂಗಳೂರಿನ ವಿವಿಧ ಕೇಂದ್ರಗಳಲ್ಲಿ ಹೊರ ಭಾಗಗಳಿಂದ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಿಂದಿನ ದಿನ ಆಗಮಿಸಿ, ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಪರೀಕ್ಷಾ ಕೇಂದ್ರದ ಸಮೀಪ ವಸತಿ ವ್ಯವಸ್ಥೆ ಮಾಡಿಕೊಂಡರೆ ಇನ್ನೂ ಉತ್ತಮ. ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೇ ಪರೀಕ್ಷೆಯಿಂದ ವಂಚಿತರಾಗುವುದರಿಂದ ಈ ರೀತಿ ವ್ಯವಸ್ಥೆ ಮಾಡುವುದರಿಂದ ತೊಂದರೆ ಆಗುವುದರಿಂದ ತಪ್ಪಿಸಿಕೊಳ್ಳಿ.
ಇದನ್ನೂ ಓದಿ: ಬಿಎಸ್‌ವೈ ಉತ್ತರಾಧಿಕಾರಿ ವಿಜಯೇಂದ್ರಗೆ ಹೆಚ್ಚುವರಿ ಜವಾಬ್ದಾರಿ : ವಿಜಯೇಂದ್ರಗೆ ಬಹುಪರಾಕ್ ಎಂದ ಹೈ ಕಮಾಂಡ್
