Home » Narendra Modi: ಬಂಡೀಪುರದಲ್ಲಿಂದು ಮೋದಿ ಸಫಾರಿ, ಎಲಿಫಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್-ಬೆಳ್ಳಿ ದಂಪತಿ ಭೇಟಿಗೆ ಕೌಂಟ್‌ಡೌನ್

Narendra Modi: ಬಂಡೀಪುರದಲ್ಲಿಂದು ಮೋದಿ ಸಫಾರಿ, ಎಲಿಫಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್-ಬೆಳ್ಳಿ ದಂಪತಿ ಭೇಟಿಗೆ ಕೌಂಟ್‌ಡೌನ್

1 comment
Narendra Modi

Modi visit Bandipur : ಪ್ರಧಾನಿ ಮೋದಿಯವರು (PM Modi) ನಿನ್ನೆ ರಾತ್ರಿಯೇ ಮೈಸೂರಿಗೆ (Mysuru) ಬಂದಿದ್ದು, ಚೆನ್ನೈ (Chennai) ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಬಂದ ಪ್ರಧಾನಿ ಮೋದಿ ರಾತ್ರಿ ರಾಡಿಸನ್ ಬ್ಲೂ ​ಹೋಟೆಲ್​​ನಲ್ಲಿ (Radisson Blu Hotel) ವಾಸ್ತವ್ಯ ಹೂಡಿದ್ದರು. ಪ್ರಧಾನಿ ಆಗಮನ ಹಿನ್ನಲೆಯಲ್ಲಿ ರ್ಯಾಡಿಸನ್​ ಹೋಟೆಲ್​​ ಸುತ್ತಾಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇಂದು ನರೇಂದ್ರ ಮೋದಿ ಅವರು ಬಂಡೀಪುರದ (Modi visit Bandipur) ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿಗಳ ಒಟ್ಟಾರೆ ಕಾರ್ಯಕ್ರಮ ಸಂಪೂರ್ಣ ಮಾಹಿತಿ ಇಲ್ಲಿದೆ.

ಏರುತ್ತಿರುವ ಚುನಾವಣಾ ಕಾವಿನ ನಡುವೆ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಬಾರಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿಲ್ಲ, ಬದಲಿಗೆ ಅವರು ಹುಲಿ ಯೋಜನೆ ಸುವರ್ಣಮಹೋತ್ಸವದಲ್ಲಿ ಭಾಗಿಯಾಗುವ ಸಲುವಾಗಿ ಬಂದಿದ್ದಾರೆ. ಭಾರತದಲ್ಲಿ ಹುಲಿ ಯೋಜನೆ 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.

ನಿನ್ನೆ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ, ಇಂದು ಬೆಳಗ್ಗೆ 7ಕ್ಕೆ ಹೆಲಿಕಾಪ್ಟರ್‌ ಮೂಲಕ ಬಂಡೀಪುರದತ್ತ ಪಯಣಿಸಲಿದ್ದಾರೆ. ಅವರು 7:30ಕ್ಕೆ ಬಂಡೀಪುರ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಾಡಿನಲ್ಲಿ 22 ಕಿ.ಮೀ ಸಫಾರಿ ನಡೆಸಿ, ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಸಂವಾದ ನಡೆಸಲಿದ್ದಾರೆ.

ಅಲಿಂದ ಮುಂದಕ್ಕೆ ಅವರು ತಮಿಳುನಾಡಿನ ಮದುಮಲೈ ಕಾಡಿಗೆ ಭೇಟಿ ನೀಡಲಿದ್ದಾರೆ. ಮತ್ತೆ ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್‌ ಆಗಿ, 50ನೇ ವರ್ಷದ ಹುಲಿ ಸಂರಕ್ಷಣಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಆಸ್ಕರ್ ಪುರಸ್ಕಾರ ಪಡೆದ ‘The Elephant Whisperers’ ಸಾಕ್ಷ್ಯ ಚಿತ್ರದ ಮಾವುತರಾದ ಬೊಮ್ಮನ್ ದಂಪತಿ ಜೊತೆ ಅವರು ಸಂವಾದ ನಡೆಸಲಿದ್ದಾರೆ.

ಇಳಿಯುತ್ತಿರುವ ಹುಲಿಗಳ ಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು 1973ರಲ್ಲಿ ಹುಲಿಗಳ ಸಂತತಿ ಕಾಪಾಡುವ ಸಲುವಾಗಿ ಪ್ರಾಜೆಕ್ಟ್ ಟೈಗರ್ ಶುರು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತೀ 4 ವರ್ಷಗಳಿಗೊಮ್ಮೆ ವೈಜ್ಞಾನಿಕವಾಗಿ ಹುಲಿ ಗಣತಿ ಮಾಡುತ್ತಾ ಬರಲಾಗುತ್ತಿದೆ. ಅಲ್ಲದೆ ರಕ್ಷಿತಾರಣ್ಯಗಳಲ್ಲಿ ಕೂಡಾ ಹುಲಿ ಸಂರಕ್ಷಣೆ ಮಾಡಲಾಗುತ್ತಿದೆ. ಈಗ ದೇಶದಲ್ಲಿ ಒಟ್ಟು 53 ಹುಲಿ ಸಂರಕ್ಷಿತ ಪ್ರದೇಶಗಳಿವೆ.

2018ರ ಹುಲಿಗಣತಿ ಪ್ರಕಾರ ಮಧ್ಯ ಪ್ರದೇಶದಲ್ಲಿ 526 ಹುಲಿಗಳನ್ನ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ 524 ಹುಲಿಗಳಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. 2022ನೇ ಸಾಲಿನ ಹುಲಿಗಣತಿ ಕೂತೂಹಲ ಮೂಡಿಸಿದ್ದು ಹುಲಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಏರಿರುವ ಸಂಭವವಿದೆ.

ಇದನ್ನೂ ಓದಿ: HD Kumaraswamy: ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್‌ ಸ್ಕೂಟರ್‌: ಎಚ್‌.ಡಿ ಕುಮಾರಸ್ವಾಮಿ ಹೊಸ ಭರವಸೆ

You may also like

Leave a Comment